Fire-Boltt Collide: ಟ್ರೆಂಡಿ ಮತ್ತು ಸ್ಮಾರ್ಟ್ ಆಗಿದೆ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Apr 12, 2023 | 10:00 AM

ಫೈರ್ ಬೋಲ್ಟ್ ಬಿಡುಗಡೆ ಮಾಡಿರುವ ಹೊಸ ಕೊಲೈಡ್ ಸ್ಮಾರ್ಟ್​ವಾಚ್, ಬಜೆಟ್ ದರಕ್ಕೆ ದೊರೆಯುತ್ತಿದೆ. ಆಕರ್ಷಕ ಸ್ಮಾರ್ಟ್​ವಾಚ್ ಇದಾಗಿದ್ದು, ಬ್ಲೂಟೂತ್ ಕಾಲಿಂಗ್ ವೈಶಿಷ್ಟ್ಯ ಹೊಂದಿದೆ.

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಇಂದು ಇರುವ ಟ್ರೆಂಡ್ ಮತ್ತು ಟೆಕ್ನಾಲಜಿ ನಾಳೆ ಇರುವುದಿಲ್ಲ. ನಾಡಿದ್ದು ನೋಡಿದರೆ, ಮತ್ತೊಂದು ಹೊಸ ಟ್ರೆಂಡ್ ಬಂದಿರುತ್ತದೆ. ದೇಶದಲ್ಲಿ ವಿವಿಧ ವಿನ್ಯಾಸ ಮತ್ತು ಫೀಚರ್ಸ್ ಇರುವ ಸ್ಮಾರ್ಟ್​ವಾಚ್ ಪರಿಚಯಿಸಿರುವ ಫೈರ್ ಬೋಲ್ಟ್ ಕಂಪನಿ, ಹೊಸ ಸರಣಿಯ ಸ್ಮಾರ್ಟ್​ವಾಚ್ ಪರಿಚಯಿಸಿದೆ. ಫೈರ್ ಬೋಲ್ಟ್ ಕೊಲೈಡ್ ಹೆಸರಿನ ಸ್ಮಾರ್ಟ್​ವಾಚ್ ಮಾರುಕಟ್ಟೆ ಪ್ರವೇಶಸಿದೆ. ಫೈರ್ ಬೋಲ್ಟ್ ಕೊಲೈಡ್ ವಾಚ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ. ಫೈರ್ ಬೋಲ್ಟ್ ಬಿಡುಗಡೆ ಮಾಡಿರುವ ಹೊಸ ಕೊಲೈಡ್ ಸ್ಮಾರ್ಟ್​ವಾಚ್, ಬಜೆಟ್ ದರಕ್ಕೆ ದೊರೆಯುತ್ತಿದೆ. ಆಕರ್ಷಕ ಸ್ಮಾರ್ಟ್​ವಾಚ್ ಇದಾಗಿದ್ದು, ಬ್ಲೂಟೂತ್ ಕಾಲಿಂಗ್ ವೈಶಿಷ್ಟ್ಯ ಹೊಂದಿದೆ. ಫೈರ್ ಬೋಲ್ಟ್ ಕೊಲೈಡ್ ವಾಚ್, ಮೆಟಾಲಿಕ್ ವಿನ್ಯಾಸದ ಡಿಸ್​ಪ್ಲೇ ಹೊಂದಿದ್ದು, 1.32 ಇಂಚಿನ ಎಚ್​ಡಿ ಡಿಸ್​ಪ್ಲೇ ಹೊಂದಿದೆ. ಫೈರ್ ಬೋಲ್ಟ್ ಕೊಲೈಡ್ ಸ್ಮಾರ್ಟ್​ವಾಚ್ ಮೂಲಕ ನಿದ್ರೆ ಮಾಪನ, ಹೃದಯ ಬಡಿತದ ಅಳತೆ ಸಹಿತ ವಿವಿಧ ಹೆಲ್ತ್ ಟ್ರ್ಯಾಕಿಂಗ್ ಹೊಂದಿದೆ. ಅಲ್ಲದೆ, 70 ವಿವಿಧ ಸ್ಪೋರ್ಟ್ಸ್, ಆ್ಯಕ್ಟಿವಿಟಿ ಮೋಡ್
300mAh ಬ್ಯಾಟರಿ ಬೆಂಬಲ ಹೊಂದಿರುವ ಸ್ಮಾರ್ಟ್​ವಾಚ್, IP68 ವಾಟರ್ ಮತ್ತು ಡಸ್ಟ್ ರೆಸಿಸ್ಟ್ ರೇಟಿಂಗ್ ಹೊಂದಿದೆ. ಸ್ಮಾರ್ಟ್​ವಾಚ್ ಭಾರತದಲ್ಲಿ ₹3,999ಕ್ಕೆ ಲಭ್ಯವಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.