Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್

ಕಿರಣ್​ ಐಜಿ

Updated on: May 18, 2023 | 12:47 PM

ಗೂಗಲ್ ಪಿಕ್ಸೆಲ್ ಸರಣಿಯ ಫೋನ್​ಗಳು ಕ್ಯಾಮೆರಾಗೆ ಹೆಸರುವಾಸಿ, ಜತೆಗೆ ಶುದ್ಧ ಸಾಫ್ಟ್​ವೇರ್, ಅತ್ಯುತ್ತಮ ಆ್ಯಂಡ್ರಾಯ್ಡ್ ಫೋನ್​ ಬೇಕು ಎನ್ನುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ ಫೋನ್ ವಿಶೇಷತೆಗಳು ಇಲ್ಲಿವೆ.

ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ ಫೋಲ್ಡ್‌ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಗೂಗಲ್​ನ ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023ರಲ್ಲಿ ಗೂಗಲ್ ಸಂಸ್ಥೆಯ ಚೊಚ್ಚಲ ಮಡಚುವ ಫೋನ್ ಅನಾವರಣಗೊಂಡಿದೆ. ಹಲವು ವಿಶೇಷತೆಗಳಿರುವ ಈ ಫೋನ್​ನ ವಿನ್ಯಾಸ ಅದ್ಭುತವಾಗಿದ್ದು ಟೆಕ್ ಪ್ರಿಯರ ಕಣ್ಣು ಕುಕ್ಕುತ್ತಿದೆ. ಇದು ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಕೂಡ ನೀಡಲಾಗಿದೆ. ಗೂಗಲ್ ಪಿಕ್ಸೆಲ್ ಸರಣಿಯ ಫೋನ್​ಗಳು ಕ್ಯಾಮೆರಾಗೆ ಹೆಸರುವಾಸಿ, ಜತೆಗೆ ಶುದ್ಧ ಸಾಫ್ಟ್​ವೇರ್, ಅತ್ಯುತ್ತಮ ಆ್ಯಂಡ್ರಾಯ್ಡ್ ಫೋನ್​ ಬೇಕು ಎನ್ನುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ ಫೋನ್ ವಿಶೇಷತೆಗಳು ಇಲ್ಲಿವೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.