iQoo Neo 6: ವಿಶೇಷ ಆಫರ್ ₹5,000 ಡಿಸ್ಕೌಂಟ್​ನಲ್ಲಿ ಐಕ್ಯೂ ಸ್ಮಾರ್ಟ್​ಫೋನ್

ಕಿರಣ್​ ಐಜಿ

Updated on: Apr 08, 2023 | 9:30 AM

ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಮೇಲೆ ₹5,000 ಡಿಸ್ಕೌಂಟ್ ದೊರೆಯುತ್ತಿದೆ. ಅಮೆಜಾನ್ ಮತ್ತು ಐಕ್ಯೂ ಆನ್​ಲೈನ್ ತಾಣದಲ್ಲಿ ವಿಶೇಷ ಆಫರ್ ಸಲುವಾಗಿ ₹5,000 ಡಿಸ್ಕೌಂಟ್ ಪ್ರಕಟಿಸಲಾಗಿದೆ.

ಐಕ್ಯೂ ನಿಯೋ ಸ್ಮಾರ್ಟ್​ಫೋನ್ ಸರಣಿಯಲ್ಲಿ ಬಿಡುಗಡೆಯಾಗಿರುವ ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಒಂದಿದೆ. ಬಳಕೆದಾರರಿಗೆ ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಮೇಲೆ ₹5,000 ಡಿಸ್ಕೌಂಟ್ ದೊರೆಯುತ್ತಿದೆ. ಅಮೆಜಾನ್ ಮತ್ತು ಐಕ್ಯೂ ಆನ್​ಲೈನ್ ತಾಣದಲ್ಲಿ ವಿಶೇಷ ಆಫರ್ ಸಲುವಾಗಿ ₹5,000 ಡಿಸ್ಕೌಂಟ್ ಪ್ರಕಟಿಸಲಾಗಿದೆ. ಅದರ ಜತೆಗೆ ಎಕ್ಸ್​ಚೇಂಜ್ ಕೊಡುಗೆ ಕೂಡ ಇದ್ದು, ಬಳಕೆದಾರರು ಹಳೆಯ ಫೋನ್ ಎಕ್ಸ್​ಚೇಂಜ್ ಮಾಡಿಕೊಂಡು, ಹೊಸ ಫೋನ್ ಖರೀದಿಸಬಹುದು. ಇದರಿಂದ ಇನ್ನಷ್ಟು ಹೆಚ್ಚಿನ ಆಫರ್ ಕೊಡುಗೆಯ ಪ್ರಯೋಜನ ಪಡೆಯಬಹುದು. ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಮೇಲೆ ₹5,000 ಡಿಸ್ಕೌಂಟ್ ಇದ್ದು, 8GB + 128GB RAM ಆವೃತ್ತಿಗೆ ಈ ಮೊದಲು ಇದ್ದ ದರ ₹29,999 ಬದಲು, ಡಿಸ್ಕೌಂಟ್ ಬಳಿಕ ಐಕ್ಯೂ ನಿಯೋ 6 ಫೋನ್ ₹24,999ಕ್ಕೆ ಲಭ್ಯವಿದೆ. 12GB + 256GB ಆವೃತ್ತಿಗೂ ಆಫರ್ ಇದ್ದು ₹28,999ಕ್ಕೆ ಲಭ್ಯವಿದೆ. 6.62 ಇಂಚಿನ E4 AMOLED ಡಿಸ್​ಪ್ಲೇ ಹೊಂದಿರುವ ಐಕ್ಯೂ ಫೋನ್, ಎಕ್ಸ್​ಚೇಂಜ್ ಮೂಲಕ ₹22,000ಕ್ಕೆ ಫೋನ್ ಖರೀದಿಸುವ ಅವಕಾಶವಿದೆ. ಸ್ನ್ಯಾಪ್​ಡ್ರ್ಯಾಗನ್ 870 ಪ್ರೊಸೆಸರ್ ಹೊಂದಿರುವ ಐಕ್ಯೂ ನಿಯೋ 6ರಲ್ಲಿ 64MP+8MP+2MP ತ್ರಿವಳಿ ಹಿಂಬದಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.