Tecno Phantom V Fold: ಅತಿ ಕಡಿಮೆ ದರಕ್ಕೆ ದೊರೆಯುತ್ತಿದೆ ಟೆಕ್ನೋ ಮೊದಲ ಫೋಲ್ಡಿಂಗ್ ಫೋನ್

ಕಿರಣ್​ ಐಜಿ

Updated on: Apr 14, 2023 | 9:01 AM

ಟೆಕ್ನೋ, ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಫ್ಯಾಂಟಮ್ ವಿ ಫೋಲ್ಡ್ ಫೋಲ್ಡಿಂಗ್ ಫೋನ್ ಪರಿಚಯಿಸಿದೆ. ಟೆಕ್ನೋ ಫ್ಯಾಂಟಮ್ ವಿ ಪೋಲ್ಡ್ ದರ ಆರಂಭಿಕ ವಿಶೇಷ ಕೊಡುಗೆಯಾಗಿ ₹77,777ಕ್ಕೆ ಲಭ್ಯವಾಗುತ್ತಿದೆ.

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಫೋಲ್ಡಿಂಗ್ ಫೋನ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಸ್ಯಾಮ್​ಸಂಗ್ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಾಗಿದ್ದರೂ, ಇತರ ಬ್ರ್ಯಾಂಡ್​ಗಳು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸ್ಯಾಮ್​ಸಂಗ್ ನಂತರ, ಫೋಲ್ಡಿಂಗ್ ಫೋನ್ ಲೋಕಕ್ಕೆ ವಿವಿಧ ಬ್ರ್ಯಾಂಡ್​ಗಳ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಟೆಕ್ನೋ, ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಫ್ಯಾಂಟಮ್ ವಿ ಫೋಲ್ಡ್ ಫೋಲ್ಡಿಂಗ್ ಫೋನ್ ಪರಿಚಯಿಸಿದೆ. ಟೆಕ್ನೋ ಫ್ಯಾಂಟಮ್ ವಿ ಪೋಲ್ಡ್ ದರ ಆರಂಭಿಕ ವಿಶೇಷ ಕೊಡುಗೆಯಾಗಿ ₹77,777ಕ್ಕೆ ಲಭ್ಯವಾಗುತ್ತಿದೆ. ಸೀಮಿತ ಅವಧಿಗೆ ಈ ಆಫರ್ ದೊರೆಯುತ್ತಿದೆ. ಇದು ಫೋಲ್ಡಿಂಗ್ ಫೋನ್ ಒಂದಕ್ಕೆ ನಿಗದಿಪಡಿಸಿರುವ ಅತ್ಯಂತ ಕಡಿಮೆ ದರವಾಗಿದೆ ಎನ್ನುವುದು ವಿಶೇಷ. ಮೀಡಿಯಾಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್ ಹೊಂದಿರುವ ಟೆಕ್ನೋ ಫೋನ್, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ದೊರೆಯಲಿದೆ. ಫ್ಯಾಂಟಮ್ ವಿ ಫೋಲ್ಡ್ ಫೋಲ್ಡಿಂಗ್ ಫೋನ್
ಓಪನ್ 7.85 ಇಂಚಿನ ಡಿಸ್​ಪ್ಲೇ, 6.42 ಇಂಚಿನ ಕವರ್ ಡಿಸ್​ಪ್ಲೇ ಹೊಂದಿದೆ. 50 MP ಮುಖ್ಯ ಕ್ಯಾಮೆರಾ, 50 MP+13 MP ಹಿಂಬದಿ ಕ್ಯಾಮೆರಾ ಜತೆಗೆ 32 MP+ 16 MP ಸೆಲ್ಫಿ ಕ್ಯಾಮೆರಾ ಹೊಂದಿದೆ ಫ್ಯಾಂಟಮ್ ವಿ ಫೋಲ್ಡ್. 5,000mAh ಬ್ಯಾಟರಿ ಮತ್ತು 45W ವೈರ್ ಫಾಸ್ಟ್ ಚಾರ್ಜಿಂಗ್ ಇದ್ದು, 12GB RAM + 256GB ಮಾದರಿಗೆ ₹89,999 ದರ ಮತ್ತು 12GB RAM + 512GB ಆವೃತ್ತಿಗೆ ₹99,999 ದರವಿದೆ. ಅಮೆಜಾನ್ ಮೂಲಕ ಸೀಮಿತ ಅವಧಿಗೆ ₹77,777 ಆಫರ್​ನಲ್ಲಿ ಲಭ್ಯವಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.