Tecno Phantom V Fold: ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಮತ್ತೊಂದು ಫೋಲ್ಡಿಂಗ್ ಫೋನ್

ಕಿರಣ್​ ಐಜಿ

Updated on: Apr 04, 2023 | 9:00 AM

ಬಜೆಟ್ ದರಕ್ಕೆ ಸೂಪರ್ ಸ್ಮಾರ್ಟ್​​ಫೋನ್ ಒದಗಿಸುತ್ತಿರುವ ಟೆಕ್ನೋ ಕೂಡ, ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋಲ್ಡಿಂಗ್ ಫೋನ್, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ.

ಫೋಲ್ಡಿಂಗ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳದ್ದೇ ಹವಾ ಸೃಷ್ಟಿಯಾಗುತ್ತಿದೆ. ಸ್ಯಾಮ್​ಸಂಗ್ ಈಗಾಗಲೇ ಫೋಲ್ಡಿಂಗ್ ಫೋನ್ ಸರಣಿಯಲ್ಲಿ ಹಲವು ಮಾದರಿಗಳನ್ನು ಪರಿಚಯಿಸಿದೆ. ಜತೆಗೆ, ಇತರ ಕಂಪನಿಗಳಾದ ವಿವೊ, ಒಪ್ಪೊ, ಹುವೈ ಕೂಡ ವಿವಿಧ ಆಕರ್ಷಕ ಫೋಲ್ಡಿಂಗ್ ಫೋನ್ ಬಿಡುಗಡೆ ಮಾಡುತ್ತಿದೆ. ಅದರಂತೆ, ಬಜೆಟ್ ದರಕ್ಕೆ ಸೂಪರ್ ಸ್ಮಾರ್ಟ್​​ಫೋನ್ ಒದಗಿಸುತ್ತಿರುವ ಟೆಕ್ನೋ ಕೂಡ, ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋಲ್ಡಿಂಗ್ ಫೋನ್, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ನೂತನ ಫೋನ್ ವೈಶಿಷ್ಟ್ಯಗಳ ಕುರಿತು ಮಾಹಿತಿ ಇಲ್ಲಿದೆ. ಮಡಚಬಲ್ಲ ಫೋನ್​ ಕುರಿತು ಜನರಿಗೆ ಹೆಚ್ಚಿನ ಆಸಕ್ತಿಯಿದ್ದರೂ, ಬೆಲೆ ಕಾರಣದಿಂದ ನಿರೀಕ್ಷಿತ ಜನಪ್ರಿಯತೆ ಗಳಿಸಿಲ್ಲ. ಆದರೆ ಚೀನಾ ಮೂಲದ ಕಂಪನಿಗಳ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಭಾರತಕ್ಕೆ ಲಗ್ಗೆ ಇರಿಸಿದ ಬಳಿಕ, ಹೆಚ್ಚು ಫೋಲ್ಢಿಂಗ್ ಸ್ಮಾರ್ಟ್​ಫೋನ್ ಮಾದರಿಗಳು ಬಿಡುಗಡೆಯಾಗುತ್ತಿವೆ.

Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.