Vivo T2 5G: ಪ್ರೀಮಿಯಂ ಫೀಚರ್ಸ್ ಇದ್ರೂ ಬಜೆಟ್ ದರಕ್ಕೆ ಲಭ್ಯ ವಿವೊ ಫೋನ್

|

Updated on: Apr 14, 2023 | 10:00 AM

ಹೊಸ ವಿವೊ ಸರಣಿ ವಿವೊ T2 5G ಫೋನ್ ₹18,999ಕ್ಕೆ ಆರಂಭಿಕ ದರದಲ್ಲಿ ಲಭ್ಯವಾಗುತ್ತಿದೆ. ಹೊಸ ಸ್ಮಾರ್ಟ್​ಫೋನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. ವಿವೊ ಹೊಸ ಸರಣಿಯಲ್ಲಿ Vivo T2 5G ಮತ್ತು Vivo T2x 5G ಬಿಡುಗಡೆಯಾಗುತ್ತಿದ್ದು, Android 13 ಆಧಾರಿತ FunTouch OS 13 ಓಎಸ್ ಹೊಂದಿದೆ.

ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ವಿವೊ ಕಂಪನಿ, ವಿವಿಧ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ. ವಿವೊ ಬಜೆಟ್ ದರದ ಫೋನ್​ನಿಂದ ತೊಡಗಿ, ಪ್ರೀಮಿಯಂ ಫೀಚರ್ಸ್ ಇರುವ ಫೋನ್​ವರೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ವಿವೊ ಹೊಸದಾಗಿ ಟಿ ಸರಣಿಯಲ್ಲಿ ಎರಡು ಸೂಪರ್ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿವೊ T2 5G ಮತ್ತು Vivo T2x 5G ಭಾರತದಲ್ಲಿ ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿದೆ. ಹೊಸ ವಿವೊ ಸರಣಿ ವಿವೊ T2 5G ಫೋನ್ ₹18,999ಕ್ಕೆ ಆರಂಭಿಕ ದರದಲ್ಲಿ ಲಭ್ಯವಾಗುತ್ತಿದೆ. ಹೊಸ ಸ್ಮಾರ್ಟ್​ಫೋನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. ವಿವೊ ಹೊಸ ಸರಣಿಯಲ್ಲಿ Vivo T2 5G ಮತ್ತು Vivo T2x 5G ಬಿಡುಗಡೆಯಾಗುತ್ತಿದ್ದು, Android 13 ಆಧಾರಿತ FunTouch OS 13 ಓಎಸ್ ಹೊಂದಿದೆ. ಸ್ನ್ಯಾಪ್​ಡ್ರ್ಯಾಗನ್ 695 5G ಪ್ರೊಸೆಸರ್ ಹೊಂದಿರುವ ವಿವೊ ಫೋನ್ 6.38 ಇಂಚಿನ AMOLED ಡಿಸ್​ಪ್ಲೇ ಇದೆ. Vivo T2 5G ಫೋನ್ 6GB RAM + 128GB ಆವೃತ್ತಿಗೆ ₹18,999 ದರ ಮತ್ತು Vivo T2 5G ಫೋನ್ 8GB RAM + 128GB ಆವೃತ್ತಿಗೆ ₹20,999 ದರವಿದೆ. 4500mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದ್ದು, 64 ಮೆಗಾಪಿಕ್ಸೆಲ್+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದೆ.

Follow us on