Viral: ಬೆಂಗಳೂರು; ‘ನಾಯಿಮಾಂಸ ಕಾನೂನುಬದ್ಧಗೊಳಿಸಿ’ ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ

Bengaluru : ಬೆಂಗಳೂರಿನ ಚರ್ಚ್​ ಸ್ಟ್ರೀಟ್​ನಲ್ಲಿ ಈತನನ್ನು ನೋಡಿದೆ, ಮಾತನಾಡಿಸಿದೆ, ಈತ ಬಹಳ ಸ್ಮಾರ್ಟ್​ ಆಗಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈತ ಯಾರು? ಏನು ಎನ್ನುವ ಬಗ್ಗೆ ಸುಳಿವಿಲ್ಲ. ಈ ಪೋಸ್ಟ್​ನ ಸತ್ಯಾಸತ್ಯತೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿದ ನೀವು ಏನು ಅಭಿಪ್ರಾಯ ನೀಡುತ್ತೀರಿ ಎಂಬ ಕುತೂಹಲ ನಮಗಿದೆ.

Viral: ಬೆಂಗಳೂರು; ನಾಯಿಮಾಂಸ ಕಾನೂನುಬದ್ಧಗೊಳಿಸಿ ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ
ನಾಯಿಮಾಂಸವನ್ನು ಕಾನೂನುಬದ್ಧಗೊಳಿಸಿ ಎಂದು ಭಿತ್ತಿಫಲಕ ಹಿಡಿದು ಸಹಿ ಕೇಳುತ್ತಿರುವ ಬೆಂಗಳೂರಿನ ಯುವಕ

Updated on: Aug 23, 2023 | 5:56 PM

Dog Meat : ‘ನಾಯಿ ಮಾಂಸವನ್ನು ಕಾನೂನುಬದ್ಧಗೊಳಿಸಿ ಮತ್ತು ನನ್ನ ಈ ಮನವಿಗೆ ಸಹಿ ಹಾಕಿ’ ಎಂಬ ಭಿತ್ತಿಫಲಕವನ್ನು ಹಿಡಿದ ಯುವಕನ ಫೋಟೋ X (Twitter)ನಲ್ಲಿ ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರು ಪರ ವಿರೋಧ ಚರ್ಚೆಗಳಲ್ಲಿ ಮುಳುಗಿದ್ದಾರೆ. ಇದು ಬೆಂಗಳೂರಿನ ಚರ್ಚ್​ ಸ್ಟ್ರೀಟ್ ಎಂದು ಒಬ್ಬರು ಹೇಳಿದ್ದಾರೆ. ಈ ವ್ಯಕ್ತಿ ಈಗಲೂ ಅಲ್ಲೇ ಇದ್ಧಾನೆಯೇ? ಹಾಂ ಇವನ ಸುತ್ತಲೂ ಜನ ಮುತ್ತಿಕೊಂಡಿದ್ದಾರೆ. ನಾನು ನಿನ್ನೆ ಇವನನ್ನು ಇದೇ ಜಾಗದಲ್ಲಿ ನೋಡಿದೆ, ಅವನ ಮುಖದ ಮೇಲೆ ಹೊಡೆಯುವಷ್ಟು ಹತ್ತಿರವಿದ್ದೆ. ಯಾಕ್ ಗುರು ಡಾಗ್ ಬಿಸ್ಕೆಟ್​ ತಿಂದು ಬೇಜಾರಾಯ್ತಾ? ಇವನನ್ನು ಯೋಗಿಜೀ ಬಳಿ ಕಳಿಸಿ ಉತ್ತಪ್ರದೇಶಕ್ಕೆ… ಅಂತೆಲ್ಲ ಪ್ರತಿಕ್ರಿಯೆಗಳು ಈ ಪೋಸ್ಟ್​ನಡಿ ಇವೆ. ಆ. 20ರಂದು ಋಗ್ವೇದ್​​ ಎನ್ನುವವರು ಈ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : Viral Video: ‘ಕಾನ್ಫಿಡೆನ್ಸ್​ ಈಸ್ ಸೆಕ್ಸಿ’; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!  

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಂಗಳೂರಿನ ಯುವಕನೊಬ್ಬ ಇಂಥ ವಿಚಿತ್ರ ಮನವಿಯುಳ್ಳ ಭಿತ್ತಿಫಲಕವನ್ನು ಹಿಡಿದು ಬೆಂಗಳೂರಿನಲ್ಲಿ ಬೀದಿಗಿಳಿದ ಚಿತ್ರ ಇದಾಗಿದೆ. ಈತನಕ ಸುಮಾರು 4.5 ಲಕ್ಷ ಜನರು ಇದನ್ನು ನೋಡಿದ್ದಾರೆ. 1,300 ಜನರು ಲೈಕ್ ಮಾಡಿದ್ದಾರೆ. 110 ಜನರು ರೀಪೋಸ್ಟ್ ಮಾಡಿದ್ದಾರೆ. ಈ ಯುವಕ ತಮಾಷೆ ಮಾಡುತ್ತಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇದು ಆತಂಕ ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ.

X ನಲ್ಲಿ ಹರಿದಾಡುತ್ತಿರುವ ಈ ಫೋಟೋ

ನಾನು ಈ ವ್ಯಕ್ತಿಯೊಂದಿಗೆ ಮಾತನಾಡಿ ಅವನ ವಿಚಿತ್ರ ಮನವಿಯ ಹಿಂದಿನ ಕಾರಣವನ್ನು ತಿಳಿದುಕೊಂಡಿದ್ದೇನೆ. ಎಂದು ಹೇಳಿಕೊಂಡಿದ್ದಾರೆ. ಅವನು ಮೂಲತಃ ಸಸ್ಯಾಹಾರಿ. ನೀವು ಕೋಳಿಗಳನ್ನು ತಿನ್ನುತ್ತೀರಾದರೆ ನಾಯಿಗಳನ್ನು ಏಕೆ ತಿನ್ನಬಾರದು? ಎಂದು ಸುಮಾರು ಅರ್ಧಗಂಟೆಯ ತನಕ ವಾದಿಸಿದ. ಆನಂತರ, ನೀವು ಸಸ್ಯಾಹಾರಿಯಾಗಿದ್ದರೆ ಈ ಫಲಕವನ್ನು ಏಕೆ ಹಿಡಿದುಕೊಂಡಿದ್ದೀರಿ? ಎಂದೆ. ನಿಜಕ್ಕೂ ಅವ ತುಂಬಾ ಸ್ಮಾರ್ಟ್​ ಆಗಿದ್ದಾನೆ ಎಂದಿದ್ದಾರೆ ಒಬ್ಬರು. ಒಟ್ಟಾರೆಯಾಗಿ ಇದು ತುಂಬಾ ತಮಾಷೆಯಿಂದ ಕೂಡಿದೆ ಎನ್ನುತ್ತಿದ್ದಾರೆ ಅನೇಕರು. ಸುಮ್ಮನೆ ಪ್ರಚಾರ ಗಿಟ್ಟಿಸಿಕೊಳ್ಳಲು ಇಂಥವರು ಇಂಥ ಕೆಲಸಗಳನ್ನು ಮಾಡುತ್ತಾರೆ ಎಂದಿದ್ದಾರೆ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

 

Published On - 5:55 pm, Wed, 23 August 23