Airtel Recharge Plan: ರಿಲಯನ್ಸ್​​ ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ

|

Updated on: Jul 02, 2024 | 12:18 PM

ಜಿಯೋ ಮೊಬೈಲ್ ಧ್ವನಿ ಕರೆ ಮತ್ತು ಡಾಟಾ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್​ಟೆಲ್ ಕೂಡ ಬೆಲೆ ಏರಿಕೆ ಮಾಡಿದೆ. ಏರ್​ಟೆಲ್ ಸಂಸ್ಥೆ ವಿವಿಧ ಪ್ಲಾನ್​ಗಳಿಗೆ ಶೇ. 11ರಿಂದ ಶೇ. 21ರವರೆಗೂ ದರ ಹೆಚ್ಚಳ ಮಾಡಿದೆ. ರಿಲಾಯನ್ಸ್ ಜಿಯೋ ಶೇ. 12ರಿಂದ ಶೇ. 27ರವರೆಗೂ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದೆ.

ದೇಶದಲ್ಲಿ ಮೊಬೈಲ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ರಿಲಾಯನ್ಸ್ ಜಿಯೋ ಮೊಬೈಲ್ ಧ್ವನಿ ಕರೆ ಮತ್ತು ಡಾಟಾ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್​ಟೆಲ್ ಕೂಡ ಬೆಲೆ ಏರಿಕೆ ಮಾಡಿದೆ. ಏರ್​ಟೆಲ್ ಸಂಸ್ಥೆ ವಿವಿಧ ಪ್ಲಾನ್​ಗಳಿಗೆ ಶೇ. 11ರಿಂದ ಶೇ. 21ರವರೆಗೂ ದರ ಹೆಚ್ಚಳ ಮಾಡಿದೆ. ರಿಲಾಯನ್ಸ್ ಜಿಯೋ ಶೇ. 12ರಿಂದ ಶೇ. 27ರವರೆಗೂ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದೆ. ಜಿಯೋ ಮತ್ತು ಏರ್​ಟೆಲ್ ಹೊಸ ದರಗಳು ಜುಲೈ 3ರಂದು ಜಾರಿಗೆ ಬರಲಿದೆ. ಈ ಹಿಂದಿನ ದರ ಮತ್ತು ಪರಿಷ್ಕೃತ ದರದ ಕುರಿತು ಹೆಚ್ಚಿನ ವಿವರ ಇಲ್ಲಿದೆ.