Amazon Prime Day: ಹೊಸ ಫೋನ್​ ಬಿಡುಗಡೆ ಮತ್ತು ವಿಶೇಷ ಆಫರ್ ನೀಡುವ ಪ್ರೈಮ್ ಡೇ ಸೇಲ್

ಕಿರಣ್​ ಐಜಿ

Updated on: Jul 04, 2023 | 6:45 PM

ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್​ನಲ್ಲಿ ಮೊಟೊರೊಲಾ ರೇಜರ್ 40, ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 ಎಂಬ ಮೂರು ಹೊಸ ಮಾದರಿಗಳ ಸ್ಮಾರ್ಟ್​ಫೋನ್ ಲಭ್ಯವಾಗಲಿದೆ. ಈ ಫೋನ್ ಬಿಡುಗಡೆಗೂ ಮೊದಲೇ, ಅಮೆಜಾನ್ ಆಫರ್ ಸೇಲ್​ನಲ್ಲಿ ಕಾಣಿಸಿಕೊಂಡಿದ್ದು, ಬೆಲೆ ವಿವರ ಬಹಿರಂಗವಾಗಿದೆ. ನೂತನ ಫೋನ್ ವಿವರ, ಬೆಲೆ ಮಾಹಿತಿ ವಿಡಿಯೊದಲ್ಲಿದೆ.

ಅಮೆಜಾನ್ ಪ್ರೈಮ್ ಡೇ ಸೇಲ್ ಎಂದರೆ, ಆನ್​ಲೈನ್​ನಲ್ಲಿ ಖರೀದಿಸುವವರಿಗೆ ಹಬ್ಬವೇ ಸರಿ.. ಹೊಸ ಉತ್ಪನ್ನ, ಗ್ಯಾಜೆಟ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಸಹಿತ ವಿವಿಧ ಉತ್ಪನ್ನ ಖರೀದಿಸುವವರಿಗೆ, ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್ ಹಲವು ಕೊಡುಗೆಗಳನ್ನು ನೀಡುತ್ತದೆ. ಈ ಬಾರಿ ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್​ ಜುಲೈ 15 ಮತ್ತು 16ರಂದು ಎರಡು ದಿನಗಳ ಕಾಲ ನಡೆಯಲಿದೆ. ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್​ನಲ್ಲಿ ಮೊಟೊರೊಲಾ ರೇಜರ್ 40, ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 ಎಂಬ ಮೂರು ಹೊಸ ಮಾದರಿಗಳ ಸ್ಮಾರ್ಟ್​ಫೋನ್ ಲಭ್ಯವಾಗಲಿದೆ. ಈ ಫೋನ್ ಬಿಡುಗಡೆಗೂ ಮೊದಲೇ, ಅಮೆಜಾನ್ ಆಫರ್ ಸೇಲ್​ನಲ್ಲಿ ಕಾಣಿಸಿಕೊಂಡಿದ್ದು, ಬೆಲೆ ವಿವರ ಬಹಿರಂಗವಾಗಿದೆ. ನೂತನ ಫೋನ್ ವಿವರ, ಬೆಲೆ ಮಾಹಿತಿ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.