Amazon Prime Day: ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಭರ್ಜರಿ ಸ್ಮಾರ್ಟ್​ಫೋನ್​ ಸೇಲ್!

ಕಿರಣ್​ ಐಜಿ

Updated on: Jul 24, 2023 | 4:30 PM

ಅಮೆಜಾನ್ ಪ್ರೈಮ್ ಡೇ ಸೇಲ್​ನ ಅಂಕಿ ಅಂಶಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಪ್ರತಿ ಸೆಕೆಂಡ್​ಗೆ 5 ಸ್ಮಾರ್ಟ್​ಫೋನ್ ಮಾರಾಟ ಮಾಡಿರುವುದಾಗಿ ಹೇಳಿದೆ. ಕಳೆದ ವರ್ಷದ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ ಈ ಬಾರಿ 14% ಹೆಚ್ಚು ಸದಸ್ಯರು ಶಾಪಿಂಗ್‌ ಮಾಡಿದ್ದಾರೆ.

ಜುಲೈ 15 ಮತ್ತು 16ರಂದು ಎರಡು ದಿನಗಳ ಕಾಲ ನಡೆದ ಅಮೆಜಾನ್ ಪ್ರೈಮ್ ಡೇ ಸೇಲ್​ನ ಅಂಕಿ ಅಂಶಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಪ್ರತಿ ಸೆಕೆಂಡ್​ಗೆ 5 ಸ್ಮಾರ್ಟ್​ಫೋನ್ ಮಾರಾಟ ಮಾಡಿರುವುದಾಗಿ ಹೇಳಿದೆ. ಕಳೆದ ವರ್ಷದ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ ಈ ಬಾರಿ 14% ಹೆಚ್ಚು ಸದಸ್ಯರು ಶಾಪಿಂಗ್‌ ಮಾಡಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದ ಒನ್‌ಪ್ಲಸ್‌ ನಾರ್ಡ್‌ 3 5ಜಿ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ34 5ಜಿ, ಮೊಟೊರೊಲಾ ರೇಝರ್‌ 40 ಸಿರೀಸ್, ರಿಯಲ್‌ಮಿ ನಾರ್ಝೋ 60 ಸಿರೀಸ್ ಮತ್ತು ಐಕ್ಯೂ ನಿಯೋ 7 ಪ್ರೋ 5ಜಿ ಫೋನ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಜತೆಗೆ ಜನರು ಡಿಸ್ಕೌಂಟ್ ಮಾತ್ರವಲ್ಲದೆ, ಕ್ಯಾಶ್​ಬ್ಯಾಕ್, ಎಕ್ಸ್​ಚೇಂಜ್ ಕೊಡುಗೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಸ್ಯಾಮ್​ಸಂಗ್ ಗ್ಯಾಲಕ್ಸಿ M34 5G ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.