Apple iPhone 15: ಮಾರ್ಕೆಟ್​​ಗೆ ಬಂತು USB-C ಆ್ಯಪಲ್ ಐಫೋನ್ 15

ಕಿರಣ್​ ಐಜಿ

Updated on: Sep 14, 2023 | 6:06 PM

ಆ್ಯಪಲ್‌ನ ಈವೆಂಟ್‌ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಅಧಿಕೃತವಾಗಿ ಲಾಂಚ್ ಆಗಿದೆ. ನಿರೀಕ್ಷೆಯಂತೆಯೇ ಹೊಸ ಆ್ಯಪಲ್ ಐಫೋನ್​ನಲ್ಲಿ ಹಲವು ವೈಶಿಷ್ಟ್ಯಗಳನ್ನು ಕಂಪನಿ ಪರಿಚಯಿಸಿದೆ.

ಆ್ಯಪಲ್​ನ ವಂಡರ್‌ಲಸ್ಟ್ ಸಮಾರಂಭದಲ್ಲಿ ಬಹುನಿರೀಕ್ಷಿತ ಐಫೋನ್ 15 ಬಿಡುಗಡೆಯಾಗಿದೆ. ಸೆಪ್ಟೆಂಬರ್ 12 ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿನ ಆ್ಯಪಲ್ ಪಾರ್ಕ್​​ನಲ್ಲಿ ನಡೆದ ಆ್ಯಪಲ್‌ನ ಈವೆಂಟ್‌ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಅಧಿಕೃತವಾಗಿ ಲಾಂಚ್ ಆಗಿದೆ. ನಿರೀಕ್ಷೆಯಂತೆಯೇ ಹೊಸ ಆ್ಯಪಲ್ ಐಫೋನ್​ನಲ್ಲಿ ಹಲವು ವೈಶಿಷ್ಟ್ಯಗಳನ್ನು ಕಂಪನಿ ಪರಿಚಯಿಸಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಅವರು ನೂತನ ಗ್ಯಾಜೆಟ್​ಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಹೊಸ ಸರಣಿಯ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.