ಗ್ಯಾಜೆಟ್ ಮಾರುಕಟ್ಟೆಗೆ ಆ್ಯಪಲ್ ಬಹುನಿರೀಕ್ಷಿತ ಐಫೋನ್ 15 ಬಿಡುಗಡೆಯಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್ನಲ್ಲಿ ನಡೆದ ಆ್ಯಪಲ್ ಈವೆಂಟ್ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಲಾಂಚ್ ಆಗಿದೆ. ಆ್ಯಪಲ್ ಐಫೋನ್ 15 ಖರೀದಿಸುವ ಯೋಚನೆ ನಿಮಗಿದ್ದರೆ, ₹5,000 ಕ್ಯಾಶ್ಬ್ಯಾಕ್ ಡಿಸ್ಕೌಂಟ್ ಪ್ರಯೋಜನ ಪಡೆಯಬಹುದು. ಅಲ್ಲದೆ, ಅಪ್ಗ್ರೇಡ್ ಪ್ಲ್ಯಾನ್ ಮೂಲಕ ಹಳೆಯ ಫೋನ್ ಕೊಟ್ಟು, ಎಕ್ಸ್ಚೇಂಜ್ ಪ್ರಯೋಜನವನ್ನೂ ಪಡೆಯಬಹುದು.