Nithya Bhavishya: ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ

|

Updated on: Jul 08, 2024 | 6:49 AM

ಜೀವನದಲ್ಲಿ ಮುಂದೆ ಏನು ಆಗುತ್ತೆ. ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಪರಿಹಾರವೇನು. ನಾವು ಯಾವ ರೀತಿ ಮುಂದುವರೆಯಬೇಕು ಎಂಬ ಗೊಂದಲ ಉಂಟಾದಾಗ ನಮಗೆ ಸಹಾಯಕ್ಕೆ ಬರುವುದೇ ಜ್ಯೋತಿಷ್ಯ. ಇಲ್ಲಿ ನಾವು ಈ ದಿನ ಯಾವ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಬರಬಹುದು ಎಂಬ ಬಗ್ಗೆ ಊಹಿಸಿದ್ದೇವೆ. ನಿಮ್ಮ ರಾಶಿ ಫಲ ಹೇಗಿದೆ ಇಲ್ಲಿ ತಿಳಿಯಿರಿ.

ನಮ್ಮ ನಿತ್ಯದ ಜೀವನದಲ್ಲಿ ನಾವು ದೈನಂದಿನ (Horoscope) ಜೀವನದಲ್ಲಿ ಜಾತಕ ನೋಡುವುದನ್ನು ಮರೆಯಬಾರದು. ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನೆಗಳಿಂದ ಪ್ರಭಾವಿತವಾಗಿರತ್ತವೆ. ಏಕೆಂದರೆ ಅವು ನಿರಂತರವಾಗಿ ತಮ್ಮ ಸ್ಥಾನಗಳನ್ನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಯಿಸುತ್ತವೆ. ಈ ಚಲನವು ಒಬ್ಬರ ಜೀವನದಲ್ಲಿ ಧನಾತ್ಮಕವಾಗಿದ್ದರೆ ಮತ್ತೊಬ್ಬರ ಜೀವನಕ್ಕೆ ನಕಾರಾತ್ಮಕ ಪ್ರಭಾವಗಳನ್ನು ತರಬಹುದು. ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದಿರುವುದು ಅನಿಶ್ಚಿತತೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ಗ್ರಹಗಳ ಚಲನವಲನ ಹೇಗಿದೆ? ಇಂದಿನ (ಜುಲೈ.08) ರಾಶಿ ಭವಿಷ್ಯವೇನು? ಇಂದಿನ ಅಥವಾ ನಾಳೆಯ ಜಾತಕವನ್ನು ಹುಡುಕುತ್ತಿರುವಿರಾ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on