ಸ್ಮಾರ್ಟ್ಫೋನ್ ಬಳಕೆದಾರರಿಗೆ ಗೇಮಿಂಗ್ನಲ್ಲಿ ವಿಶಿಷ್ಟ ಅನುಭವ ನೀಡುವುದು ಏಸಸ್ ಫೋನ್ಗಳು. ಅದರಲ್ಲೂ ಝೆನ್ಫೋನ್ ಸರಣಿ, ಅತ್ಯಂತ ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್ಗಳ ನೈಜ ಅನುಭವ ಪಡೆಯಲು ಉತ್ತಮ ಸ್ಮಾರ್ಟ್ಫೋನ್ ಅಗತ್ಯವಾಗಿ ಬೇಕು. ಅದಕ್ಕೆ ಪೂರಕವಾಗಿ ಏಸಸ್, ಹೊಸ ಸರಣಿಯಲ್ಲಿ ಏಸಸ್ ಝೆನ್ಫೋನ್ 10 ಬಿಡುಗಡೆ ಮಾಡಿದೆ. 4,300mAh ಬ್ಯಾಟರಿ ಮತ್ತು 30W ಚಾರ್ಜಿಂಗ್ ಇದರ ವಿಶೇಷತೆಯಾಗಿದೆ. ಏಸಸ್ ರಾಗ್ ಫೋನ್ ಸರಣಿಯಂತೆಯೇ, ಝೆನ್ಫೋನ್ ಕೂಡ ಉತ್ತಮ ಕ್ಯಾಮೆರಾ, ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.