Autorickshaw Strike: ಆಟೋ ಚಾಲಕರ ಮಧ್ಯೆ ಭಿನ್ನಮತ, ಮುಷ್ಕರಕ್ಕೆ 50-50 ಸಪೋರ್ಟ್

|

Updated on: Mar 20, 2023 | 9:53 AM

ವಿವಿಧ ಬೇಡಿಕೆ ಆಗ್ರಹಿಸಿ ಆಟೋ ಚಾಲಕರ ಮುಷ್ಕರ ನಡೆಸುತ್ತಿದ್ದು, ಆದರೆ ಚಾಲಕರ ಮಧ್ಯೆಯೇ ಭಿನ್ನಮತ ಮೂಡಿ, ಕೆಲವು ಆಟೋಗಳು ರಸ್ತೆಗೆ ಇಳಿದಿವೆ.

ಬೆಂಗಳೂರು: ರ್ಯಾಪಿಡೋ, ಓಲಾ, ಊಬರ್​ ಸೇರಿ ವಿವಿಧ ಕಂಪನಿಗಳ ವೈಟ್​ಬೋರ್ಡ್​​​ ಬೈಕ್​ ಟ್ಯಾಕ್ಸಿ ಸೇವೆ ನಿಷೇಧಿಸಬೇಕೆಂದು ನಗರದ ಆಟೋ ಚಾಲಕರು ಮುಷ್ಕರ ನಡೆಸುತ್ತಿದ್ದು, ಆಟೋ ರಿಕ್ಷಾಗಳ ಸಂಚಾರ ಭಾಗಶಃ ಕಡಿಮೆಯಾಗಿವೆ. ಈ ಮುಷ್ಕರಕ್ಕೆ ಕೆಲ ಆಟೋ ಚಾಲಕರು ಬೆಂಬಲ ಸೂಚಿಸದೆ ಆಟೋ ಓಡಿಸುತ್ತಿದ್ದಾರೆ. ಈ ವೇಳೆ ಉಳಿದ ಆಟೋ ಚಾಲಕರು ಅವರನ್ನು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಕಂಡುಬಂದಿದೆ. ರೈಲ್ವೇ ನಿಲ್ದಾಣದ ಮುಂಭಾಗ ಸಾಗುವ ಆಟೋಗಳನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಆಟೋ ನಿಲ್ಲಿಸುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಸಪೋರ್ಟ್ ಮಾಡಿ ಅಂತ ಒತ್ತಾಯ ಮಾಡಿದ್ದಾರೆ.