BMTC: ವ್ಹೀಲ್​ಚೇರ್ ಬಳಸುವ ವಿಶೇಷ ಚೇತನರಿಗೂ ಬಿಎಮ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಅವಕಾಶ?

ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2023 | 5:05 PM

ಆದರೆ, ಕೆಲವಷ್ಟೇ ಬಸ್ ಗಳಲ್ಲಿ ಇದನ್ನು ಕಲ್ಪಿಸಿದ್ದೇಯಾದರೆ, ವಿಶೇಷ ಚೇತನರು ಅವುಗಳಿಗಾಗಿ ಕಾಯುತ್ತ ಕೂರಬೇಕಾಗುತ್ತದೆ.

ಬೆಂಗಳೂರು: ಓಡಾಟಕ್ಕೆ ವ್ಹೀಲ್ ಚೇರ್ ಗಳನ್ನು ಬಳಸುವ ವಿಶೇಷ ಚೇತನರು ಸಹ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ (BMTC) ಪ್ರಯಾಣಿಸಬಹುದಾದ ವ್ಯವಸ್ಥೆಯನ್ನು ರಾಜ್ಯ ಸಾರಿಗೆ ಇಲಾಖೆ ಕಲ್ಪಿಸುತ್ತಿದೆ. ಬಸ್ ಗಳಿಗೆ ಹೆಚ್ಚುವರಿ ಫಿಟ್ಟಿಂಗ್ ಮಾಡಿ ವಿಶೇಷ ಚೇತನರು ತಮ್ಮ ವ್ಹೀಲ್ ಚೇರ್ ನಲ್ಲಿ ಸುಲಭವಾಗಿ ಬಸ್ ಹತ್ತುವ ಏರ್ಪಾಟು ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರಿಗೆ ಡಿವೈಸ್ ಹೇಗೆ ಕೆಲಸ ಮಾಡುತ್ತದೆ ಅಂತ ವಿವರಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಎಲ್ಲ ಬಿಎಂಟಿಸಿ ಬಸ್ ಗಳಿಗೆ ಒದಗಿಸುವುದು ಸಾಧ್ಯವಿಲ್ಲ ಅನಿಸುತ್ತೆ ಯಾಕೆಂದರೆ ಅದಕ್ಕೆ ಸಾಕಷ್ಟು ವೆಚ್ಚ (cost factor) ತಗುಲಲಿದೆ. ಆದರೆ, ಕೆಲವಷ್ಟೇ ಬಸ್ ಗಳಲ್ಲಿ ಇದನ್ನು ಕಲ್ಪಿಸಿದ್ದೇಯಾದರೆ, ವಿಶೇಷ ಚೇತನರು ಅವುಗಳಿಗಾಗಿ ಕಾಯುತ್ತ ಕೂರಬೇಕಾಗುತ್ತದೆ. ಅವರ ಸಮಯ ವ್ಯರ್ಥವಾಗುವುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.