Bagalkot News: ಜನಪದ ಹಾಡಿಗೆ ಐಸಿಯು ಬೆಡ್ ಮೇಲೆ ಬಾಲಕನ ಡ್ಯಾನ್ಸ್: ವಿಡಿಯೋ ವೈರಲ್
ಜನಪದ ಹಾಡಿಗೆ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಬಾಲಕ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ (North Karnataka) ಜನಪದ (Janapada) ಹಾಡುಗಳು ಸಾಕಷ್ಟು ಪ್ರಸಿದ್ದಿ. ಜನಪದ ಹಾಡುಗಳಿಗೆ ಹುಚ್ಚು ಅಭಿಮಾನಿಗಳಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಮೂಡಿಬರುವ ಹಾಡುಗಳು ಕೇಳುಗರನ್ನು ಸೆಳೆದುಬಿಡುತ್ತವೆ. ಹೀಗೆ ಜನಪದ ಹಾಡಿಗೆ ಖಾಸಗಿ ಆಸ್ಪತ್ರೆಯೊಂದರ (Hospital) ಐಸಿಯುನಲ್ಲಿ (ICU) ಬಾಲಕ (Boy) ಡ್ಯಾನ್ಸ್ (Dance) ಮಾಡಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾ ಡ್ರೈವರ್ ನಿನ್ನ ಲವರ್ ಎಂಬ ಉತ್ತರ ಕರ್ನಾಟಕದ ಜನಪದ ಹಾಡಿಗೆ ಬಾಲಕನ ಡ್ಯಾನ್ಸ್ ಮಾಡಿದ್ದಾನೆ. ಮಲಗಿದ್ದಲ್ಲೇ ಕೈನಿಂದ ಆ್ಯಕ್ಷನ್ ಮಾಡುತ್ತಾ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ.
Published on: Jun 25, 2023 07:17 AM