BSNL Offer: ಜಿಯೋ ಮತ್ತು ಏರ್​ಟೆಲ್​ಗೆ ಸ್ಪರ್ಧೆ ಒಡ್ಡಿದ BSNL ಹೊಸ ರೀಚಾರ್ಜ್ ದರ

ಕಿರಣ್​ ಐಜಿ

Updated on: Jul 15, 2024 | 12:22 PM

ಜಿಯೋ ಮತ್ತು ಏರ್​ಟೆಲ್​ಗೆ ಸ್ಪರ್ಧೆ ನೀಡುವಂತಹ ಆಕರ್ಷಕ ಬೆಲೆಯ ಭರ್ಜರಿ ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ₹200ಕ್ಕೂ ಕಡಿಮೆ ಬೆಲೆಗೆ ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಕೂಡ ಇದೆ.

ಜುಲೈ ಮೊದಲ ವಾರದಲ್ಲೇ ರಿಲಯನ್ಸ್ ಜಿಯೋ ಮತ್ತು ಏರ್​ಟೆಲ್ ವಿವಿಧ ರೀಚಾರ್ಜ್ ಪ್ಯಾಕ್​ಗಳ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ ಅಂದರೆ ಬಿಎಸ್​ಎನ್​ಎಲ್ ಸದ್ಯದಲ್ಲೇ 4ಜಿ ನೆಟ್​ವರ್ಕ್​​​ಗೆ ಅಪ್​ಗ್ರೇಡ್ ಆಗುತ್ತಿದೆ. ಈ ಮಧ್ಯೆ ಜಿಯೋ ಮತ್ತು ಏರ್​ಟೆಲ್​ಗೆ ಸ್ಪರ್ಧೆ ನೀಡುವಂತಹ ಆಕರ್ಷಕ ಬೆಲೆಯ ಭರ್ಜರಿ ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ₹200ಕ್ಕೂ ಕಡಿಮೆ ಬೆಲೆಗೆ ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಕೂಡ ಇದೆ. ಅಲ್ಲದೆ, ದೀರ್ಘಾವಧಿಯ ಪ್ಲ್ಯಾನ್​ಗಳ ಬೆಲೆಯಲ್ಲಿ ಕೂಡ ಸಾಕಷ್ಟು ಉಳಿತಾಯ ಸಾಧ್ಯವಾಗುತ್ತದೆ. ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.