Cheetah Naming: ಚೀತಾಗೆ ಹೆಸರು ಸೂಚಿಸಿ ಜಯಶಾಲಿಯಾದವರಿಗೆ ಪ್ರಧಾನಿ ಮೋದಿ ಅಭಿನಂದನೆ
ಚೀತಾಗಳನ್ನು ಭಾರತಕ್ಕೆ ಕರೆ ತಂದ ದಿನದಿಂದಲೂ ಅವುಗಳ ಆರೋಗ್ಯ, ಚಟುವಟಿಕೆ ಬಗ್ಗೆ ಪ್ರಧಾನಿ ಮೋದಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಚೀತಾಗೆ ಹೆಸರು ಸೂಚಿಸಲು ಪ್ರಧಾನಿ ಮೋದಿ ಜನರನ್ನು ಮನ್ ಕಿ ಬಾತ್ನಲ್ಲಿ ಕೇಳಿಕೊಂಡಿದ್ದರು.
ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ ಕರೆತಂದ ಚೀತಾ ಭಾರಿ ಸುದ್ದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯೊಂದು ಅಂದು ಸಾಕಾರಗೊಂಡಿತ್ತು. ಭಾರತದ ಕಾಡುಗಳಲ್ಲಿ ಮರೆಯಾಗಿದ್ದ ಅಪರೂಪದ ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದು, ಇಲ್ಲಿ ಬೆಳೆಸಿ, ಅವುಗಳ ಸಂಖ್ಯೆ ವೃದ್ಧಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಚೀತಾಗಳನ್ನು ಭಾರತಕ್ಕೆ ಕರೆ ತಂದ ದಿನದಿಂದಲೂ ಅವುಗಳ ಆರೋಗ್ಯ, ಚಟುವಟಿಕೆ ಬಗ್ಗೆ ಪ್ರಧಾನಿ ಮೋದಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಚೀತಾಗೆ ಹೆಸರು ಸೂಚಿಸಲು ಪ್ರಧಾನಿ ಮೋದಿ ಜನರನ್ನು ಮನ್ ಕಿ ಬಾತ್ನಲ್ಲಿ ಕೇಳಿಕೊಂಡಿದ್ದರು. ಅದರಂತೆ ಹೆಸರು ಸೂಚಿಸಿದವರ ಪೈಕಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Loading...
Unable to load recommendations.
Follow Us
