ಸಿದ್ದರಾಮಯ್ಯ ಬೆಂಗಳೂರಿಂದ ಬಾಗಲಕೋಟೆಗೆ ಹೋಗುತ್ತಿದ್ದಾಗ ಹೆಲಿಕಾಪ್ಟರ್ ನಲ್ಲಿ ಇಂಧನ ಖಾಲಿಯಾಯಿತು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2023 | 6:40 PM

ಪ್ರಾಯಶಃ ಅದೇ ಸಮಯಕ್ಕೆ ಸಿದ್ದರಾಮಯ್ಯ ಮತ್ತವರ ಜೊತೆಯಿದ್ದ ನಾಯಕರ ಹೊಟ್ಟೆಗಳಲ್ಲೂ ಇಂಧನ ಖಾಲಿಯಾಗಿತ್ತು. ಹಾಗಾಗೇ, ಅವರೆಲ್ಲ ರಸ್ತೆ ಬದಿ ಚಿಕ್ಕ ಹೋಟೆಲೊಂದರಲ್ಲಿ ಕುಳಿತು ತಿಂಡಿ ತಿಂದರು

ಚಿತ್ರದುರ್ಗ: ಬುಧವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಂದ ಬಾಗಲಕೋಟೆಗೆ ತೆರಳುತ್ತಿದ್ದಾಗ ಚಾಪರ್ ನಲ್ಲಿ ಇಂಧನದ ಕೊರತೆಯಾದ ಕಾರಣ ಅದನ್ನು ಚಿತ್ರದುರ್ಗದ ಕ್ಯಾದಿಗೆರೆ ಗ್ರಾಮದ ಬಳಿ ಲ್ಯಾಂಡ್ ಮಾಡಲಾಗಿತ್ತು. ಪ್ರಾಯಶಃ ಅದೇ ಸಮಯಕ್ಕೆ ಸಿದ್ದರಾಮಯ್ಯ ಮತ್ತವರ ಜೊತೆಯಿದ್ದ ನಾಯಕರ ಹೊಟ್ಟೆಗಳಲ್ಲೂ ಇಂಧನ ಖಾಲಿಯಾಗಿತ್ತು. ಹಾಗಾಗೇ, ಅವರೆಲ್ಲ ರಸ್ತೆ ಬದಿ ಚಿಕ್ಕ ಹೋಟೆಲೊಂದರಲ್ಲಿ ಕುಳಿತು ತಿಂಡಿ ತಿಂದರು. ಸಿದ್ದರಾಮಯ್ಯ ಜೊತೆ ಜಮೀರ್ ಅಹ್ಮದ್ (Zameer Ahmed), ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ (Prakash Rathod) ಮೊದಲಾದವರು ಸಹ ಟಿಫಿನ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಾಪರ್ ನಲ್ಲಿ ಇಂಧನ ತುಂಬಿಸಿದ ಬಳಿಕ ಸಿದ್ದರಾಮಯ್ಯ ಬಾಗಲಕೋಟೆಗೆ ತೆರಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.