Bengaluru: ಚೀಟಿ ವ್ಯವಹಾರದಲ್ಲಿ ಜನರನ್ನು ವಂಚಿಸಿದರೂ ಟಿ ದಾಸರಹಳ್ಳಿ ದಂಪತಿಯದ್ದು ಮೀಸೆ ಮಣ್ಣಾಗದ ವರಸೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2023 | 10:42 AM

ವರದಿ ಮಾಡಲು ಹೋದ ಟಿವಿ9 ಕನ್ನಡ ವಾಹಿನಿಯ ವರದಿಗಾರನನ್ನು ಕಂಡು ದಂಪತಿ ಕೆಂಡಾಮಂಡಲವಾಗಿದ್ದಾರೆ

ನೆಲಮಂಗಲ: ಇದಪ್ಪಾ ವರಸೆ ಅಂದ್ರೆ! ಹಳದಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸುತ್ತಿರುವ ಮಹಿಳೆಯ ಹೆಸರು ಪುಣ್ಯ (Punya). ಆದರೆ ಈಕೆ ಮತ್ತು ಈಕೆಯ ಪತಿ ಚಂದ್ರಶೇಖರ್ (Chandrashekar) ನಡೆಸುತ್ತಿದ್ದ ಚೀಟಿ ವ್ಯವಹಾರದಲ್ಲಿ (chit fund) ಹಣ ತೊಡಗಿಸಿದವರು ಮಾತ್ರ ಪಾಪಿಷ್ಠರು! ಟಿ ದಾಸರಹಳ್ಳಿಯಲ್ಲಿ ವಾಸವಾಗಿರುವ ದಂಪತಿ ಚೀಟಿ ನಡೆಸುವ ನೆಪದಲ್ಲಿ ಜನರಿಗೆ ರೂ. 1.5 ಕೋಟಿ ವಂಚಿಸಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಚೀಟಿ ಹಾಕಿದವರಿಗೆ ದುಡ್ಡು ಹಿಂತಿರುಗಿಸಿಲ್ಲ. ಅವರೆಲ್ಲ ತಾಳ್ಮೆ ಕಳೆದುಕೊಂಡು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ ಅಲ್ಲಿಗೆ ಹೋದಾಗ ದಂಪತಿ ಕೆಂಡಾಮಂಡಲವಾಗಿದ್ದಾರೆ. ಪುಣ್ಯ ಮೇಡಂ ಕೇಳೋದನ್ನ ಗಮನಿಸಿ; ಯಾರು ಟಿವಿ9 ಚಾನೆಲ್ ನವರನ್ನು ಕರೆಸಿದ್ದು ಅಂತ ಹೇಳುತ್ತಾರೆ! ಪೊಲಿಸರು ದಂಪತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.