Bhatkal Hindu Temple: ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶ-ಇವತ್ತು ವರಸೆ ಬದಲಿಸಿದ ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2023 | 4:33 PM

ಬಾಗಿಲು ಓಪನ್ನಾಗಿದ್ದರೆ ನಾನು ಗುಡಿಯೊಳಗೆ ಪ್ರವೇಶಿಸಿರುತ್ತಿದ್ದೆ, ಅದರಲ್ಲಿ ಅಂಥ ತಪ್ಪೇನೂ ಇಲ್ಲ ಅಂತ ಹೇಳಿ ಬೇಡರ ಕಣ್ಣಪ್ಪನನ್ನು ರವಿ ಉಲ್ಲೇಖಿಸುತ್ತಾರೆ.

ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿ (CT Ravi) ಭಟ್ಕಳದಲ್ಲಿ ಮಾಂಸಾಹಾರ ಸೇವಿಸಿ ದೇವಸ್ಥಾನದೊಳಗೆ ಪ್ರವೇಶಿಸಿದ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರದಂದು ಹರಿದಾಡಿದರೂ ಶಾಸಕರು ಮಾತ್ರ ತಾವು ಗರ್ಭಗುಡಿ (sanctorum) ಪ್ರವೇಶಿಸಿಯೇ ಇಲ್ಲ ಅಂತ ಸಾಧಿಸುತ್ತಿದ್ದಾರೆ. ನಿನ್ನೆ ಮಂಡ್ಯದಲ್ಲಿ ದೇವಸ್ಥಾನಕ್ಕೆ ಹೋಗೇ ಇಲ್ಲ ಅಂತ ಹೇಳಿದ್ದ ಅವರು ನಂತರ ಹೋಗಿದ್ದೆ ಅದರೆ, ಹೊರಗಿನಿಂದಲೇ ನಮಸ್ಕಾರ ಮಾಡಿ ಬಂದೆ ಎಂದಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರ ಧ್ವನಿ ಬಹಳ ಸಾಫ್ಟ್ ಆಗಿತ್ತು. ಎರಡೂ ದೇವಸ್ಥಾನಗಳ ನಡುವಿನ ಪಾಸೇಜ್ ನಲ್ಲಿ (passage) ಮಾತ್ರ ಹೋಗಿದ್ದೆ, ಪುಣ್ಯಕ್ಕೆ ದೇವಸ್ಥಾನದ ಬಾಗಿಲು ಹಾಕಿತ್ತು, ನಾನು ಮಾಂಸಾಹಾರ ಸೇವಿಸಿ ಬಹಳ ಹೊತ್ತು ಆಗಿದ್ದ ಕಾರಣ ನನಗದು ನೆನಪು ಕೂಡ ಇರಲಿಲ್ಲ. ಬಾಗಿಲು ಓಪನ್ನಾಗಿದ್ದರೆ ನಾನು ಗುಡಿಯೊಳಗೆ ಪ್ರವೇಶಿಸಿರುತ್ತಿದ್ದೆ, ಅದರಲ್ಲಿ ಅಂಥ ತಪ್ಪೇನೂ ಇಲ್ಲ ಅಂತ ಹೇಳಿ ಬೇಡರ ಕಣ್ಣಪ್ಪನನ್ನು ಅವರು ಉಲ್ಲೇಖಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.