Karnataka Assembly Polls 2023: ಕೆಲವರನ್ನು ಬಿಟ್ಟು ಬಿಜೆಪಿಯ ಎಲ್ಲ ಶಾಸಕರಿಗೆ ಟಿಕೆಟ್ ಸಿಗಲಿದೆ: ಬಿಎಸ್ ಯಡಿಯೂರಪ್ಪ

|

Updated on: Apr 10, 2023 | 12:03 PM

ಮೊದಲಪಟ್ಟಿಯಲ್ಲಿ 170-180 ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆಯೆಂದ ಯಡಿಯೂರಪ್ಪ ಅದಕ್ಕೆ ಮೊದಲು ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದರು.

ನವದೆಹಲಿ: ಸೋಮವಾರ ಸಾಯಂಕಾಲದೊಳಗಡೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Polls) ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆಯೆಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ನವದೆಹಲಿಯಲ್ಲಿ ಸೋಮವಾರ ಬೆಳಗ್ಗೆ ಹೇಳಿದರು. ಮೊದಲಪಟ್ಟಿಯಲ್ಲಿ 170-180 ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆಯೆಂದ ಅವರು ಅದಕ್ಕೆ ಮೊದಲು ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದರು. ಎಲ್ಲ ಹಾಲಿ ಶಾಸಕರಿಗೆ (sitting MLAs) ಟಿಕೆಟ್ ಸಿಗಲಿದೆಯಾ ಎಂದು ಕೇಳಿದ ಪ್ರಶ್ನೆಗೆ ಅವರು ಕೆಲವರನ್ನು ಹೊರತುಪಡಿಸಿ ಎಲ್ಲ ಶಾಸಕರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on