Flipkart Payment: ಫ್ಲಿಪ್​ಕಾರ್ಟ್​ನಲ್ಲಿ ಬಂತು ಬಿಲ್ ಪೇಮೆಂಟ್ ವ್ಯವಸ್ಥೆ

ಕಿರಣ್​ ಐಜಿ

Updated on: Jul 13, 2024 | 2:46 PM

ಫ್ಲಿಪ್​ಕಾರ್ಟ್ ಆ್ಯಪ್ ಮೂಲಕ ಗ್ರಾಹಕರು ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜ್, ಲ್ಯಾಂಡ್ ಲೈನ್ ಬಿಲ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್​​ಪೇಯ್ಡ್ ಬಿಲ್​ಗಳನ್ನು ಪಾವತಿಸಬಹುದು.

ದೇಶದ ಪ್ರಮುಖ ಇ ಕಾಮರ್ಸ್​ ಸಂಸ್ಥೆ ಫ್ಲಿಪ್​ಕಾರ್ಟ್​ ಯುಪಿಐ ಪಾವತಿ ಪರಿಚಯಿಸಿದ ಬಳಿಕ ಈಗ ಬಿಲ್ ಪಾವತಿ ಸೇವೆಯನ್ನು ಗ್ರಾಹಕರಿಗಾಗಿ ಒದಗಿಸುತ್ತಿದೆ. ಫ್ಲಿಪ್​ಕಾರ್ಟ್ ಆ್ಯಪ್ ಮೂಲಕ ಗ್ರಾಹಕರು ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜ್, ಲ್ಯಾಂಡ್ ಲೈನ್ ಬಿಲ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್​​ಪೇಯ್ಡ್ ಬಿಲ್​ಗಳನ್ನು ಪಾವತಿಸಬಹುದು. ಭಾರತ್ ಬಿಲ್ ಪೇಮೆಂಟ್ಸ್ ಸಿಸ್ಟಂ ಮೂಲಕ ಈ ವ್ಯವಸ್ಥೆಯನ್ನು ಫ್ಲಿಪ್​ಕಾರ್ಟ್ ಒದಗಿಸುತ್ತಿದೆ. ವ್ಯಾಲೆಟ್, ಯುಪಿಐ ಮತ್ತು ವಿವಿಧ ರೀತಿಯ ಡಿಜಿಟಲ್ ಪೇಮೆಂಟ್ ಜನಪ್ರಿಯವಾಗುತ್ತಿರುವುದು ಮತ್ತು ಹೆಚ್ಚಿನ ಜನರು ನಗದು ರಹಿತ ಸೇವೆಯನ್ನೇ ಬಯಸುತ್ತಿರುವುದರಿಂದ ಫ್ಲಿಪ್​ಕಾರ್ಟ್​ ಶಾಪಿಂಗ್ ಜತೆಗೆ ಯುಪಿಐ, ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.