ಹೆಚ್​ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ ಎಂದ ಹೆಚ್ ವಿಶ್ವನಾಥ್​​​

ಸಾಧು ಶ್ರೀನಾಥ್​

Updated on: Jul 08, 2023 | 5:09 PM

ಮೈಸೂರಿನಲ್ಲಿ ಮಾತನಾಡಿದ ಹೆಚ್​.ವಿಶ್ವನಾಥ್​ ಅವರು ಹೆಚ್​ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ  ಎಂದು ಕಟಕಿಯಾಡಿದರು.

ಹೆಚ್​ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ ಎಂದ ಹೆಚ್ ವಿಶ್ವನಾಥ್​​​:  ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Adagur H. Vishwanath) ಪೆನ್ ಡ್ರೈವ್ (Pen Drive) ಆರೋಪದ ಬಗ್ಗೆ ಮೈಸೂರಿನಲ್ಲಿ (Mysore) ಹೆಚ್​ಡಿಕೆ ವಿರುದ್ಧ ಹೆಚ್​. ವಿಶ್ವನಾಥ್​ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಒಬ್ಬ ಹಿರಿಯ ನಾಯಕ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಮಾಜಿ ಪ್ರಧಾನಿಗಳ ಮಗ. ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದ್ದರೆ ತೋರಿಸಲಿ. ಇದು ಒಂಥರಾ ಬ್ಲ್ಯಾಕ್ ಮೇಲಿಂಗ್. ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಇದೊಂದು ಮಿಮಿಕ್ರಿ ತರಾ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಎಚ್ ವಿಶ್ವನಾಥ್ (Adagur H. Vishwanath) ವಾಗ್ದಾಳಿ ನಡೆಸಿದರು. ಈ ವೇಳೆ ಮುಂದುವರಿದು ಮಾತನಾಡಿದ ಹೆಚ್​.ವಿಶ್ವನಾಥ್​ ಅವರು ಹೆಚ್​ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ (Leader of Opposition) ಎಂದು ಕಟಕಿಯಾಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿನ ಕ್ಲಿಕ್ ಮಾಡಿ

Published on: Jul 08, 2023 05:07 PM
Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು