ಸರ್ಕಾರದ ಕೈಗೊಂಬೆಯಾಗಿರುವ ಹು-ಧಾ ಪಾಲಿಕೆ ಆಯುಕ್ತ ಗಣೇಶನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ: ಆರವಿಂದ್ ಬೆಲ್ಲದ್

ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2023 | 6:38 PM

ಮುಸ್ಲಿಂ ಹಬ್ಬಗಳಲ್ಲಿ ಮುಸಲ್ಮಾನರಿಗೆ ಇಲ್ಲಿ (ಈದ್ಗಾ ಮೈದಾನ/ಚನ್ನಮ್ಮ ಮೈದಾನ) ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಟಿಪ್ಪು ಜಯಂತಿಯನ್ನು ಮೈದಾನದಲ್ಲಿ ಆಚರಿಸಲು ಯಾವುದೇ ಅಡಚಣೆ ಇರೋದಿಲ್ಲ, ಆದರೆ ಗಣೇಶ ಉತ್ಸವ ಆಚರಿಸಲು ಯಾಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಬೆಲ್ಲದ್ ಪ್ರಶ್ನಿಸಿದರು.

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ (Eidgah Maidan) ಪ್ರತಿಸಲದಂತೆ ಮೂರು ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಮಾಡಿ ಉತ್ಸವ (Ganesh Utsav) ಆಚರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಯಕ್ತರು ಪರವಾನಗಿ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು. ಅಸಲಿಗೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರದ (Siddaramaiah government) ಕೈಗೊಂಬೆಯಾಗಿದ್ದಾರೆ, ಮೇಲಿಂದ ಬರುವ ನಿರ್ದೇಶನವನ್ನು ಅವರು ಪಾಲಿಸುತ್ತಿದ್ದಾರೆ ಎಂದು ಬೆಲ್ಲದ್ ಹೇಳಿದರು. ಮುಸ್ಲಿಂ ಹಬ್ಬಗಳಲ್ಲಿ ಮುಸಲ್ಮಾನರಿಗೆ ಇಲ್ಲಿ (ಈದ್ಗಾ ಮೈದಾನ/ಚನ್ನಮ್ಮ ಮೈದಾನ) ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಟಿಪ್ಪು ಜಯಂತಿಯನ್ನು ಮೈದಾನದಲ್ಲಿ ಆಚರಿಸಲು ಯಾವುದೇ ಅಡಚಣೆ ಇರೋದಿಲ್ಲ, ಆದರೆ ಗಣೇಶ ಉತ್ಸವ ಆಚರಿಸಲು ಯಾಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಬೆಲ್ಲದ್ ಪ್ರಶ್ನಿಸಿದರು. ಪರವಾನಗಿಗಾಗಿ ಅರ್ಜಿ ಸಲ್ಲಿಸಿ 15-20 ದಿನಗಳಾದರೂ ಪಾಲಿಕೆ ಕಮೀಶನರ್ ಅನುಮತಿ ನೀಡಿಲ್ಲ, ಅವರು ಪರವಾನನಿಗೆ ನೀಡದ ಹೊರತು ಇಲ್ಲಿಂದ ಹೊಗೋದಿಲ್ಲ, ರಾತ್ರಿಯೆಲ್ಲ ಇಲ್ಲೇ ಇರುತ್ತೇವೆ ಎಂದು ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.