IND vs PAK, ICC World Cup: ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ: ಅಹ್ಮದಾಬಾದ್​ಗೆ ಬಂದ ಟೀಮ್ ಇಂಡಿಯಾ ಪ್ಲೇಯರ್ಸ್

Updated on: Oct 13, 2023 | 5:14 PM

India vs Pakistan, ICC World Cup: ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 14ರ ಶನಿವಾರದಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ಆಡಲಿದೆ. ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಅಹ್ಮದಾಬಾದ್​ಗೆ ತಲುಪಿದ್ದಾರೆ. BCCI ಆಟಗಾರರು ಆಗಮಿಸುತ್ತಿರುವ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಟೀಮ್ ಇಂಡಿಯಾ ಏಕದಿನ ವಿಶ್ವಕಪ್ (ICC World Cup 2023) ಅಭಿಯಾನವನ್ನು ಅದ್ಭುತ ರೀತಿಯಲ್ಲಿ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಮಣ್ಣು ಮುಕ್ಕುಸಿತು. ಈ ಎರಡು ಗೆಲುವಿನೊಂದಿಗೆ ರೋಹಿತ್ ಪಡೆ ವಿಶ್ವಕಪ್ ಗೆಲ್ಲುವ ಹಕ್ಕನ್ನು ಬಲಗೊಳಿಸಿದೆ. ಇದೀಗ ಭಾರತ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 14ರ ಶನಿವಾರದಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ಆಡಲಿದೆ. ಇದೀಗ ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಅಹ್ಮದಾಬಾದ್​ಗೆ ತಲುಪಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರು ಆಗಮಿಸುತ್ತಿರುವ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

Loading...
Unable to load recommendations.
Follow Us
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More