iPhone 15 Pro: ಆ್ಯಪಲ್ ಐಫೋನ್ 15 ಪ್ರೊ ಮತ್ತಷ್ಟು ದುಬಾರಿ ಬೆಲೆ ಸಾಧ್ಯತೆ

ಕಿರಣ್​ ಐಜಿ

Updated on: Aug 03, 2023 | 7:30 AM

ಐಫೋನ್ 15 ಪ್ರೊ, ಐಫೋನ್ 14 ಪ್ರೊ ಗಿಂತ ಸುಮಾರು ₹10,000 ಅಧಿಕ ಬೆಲೆ ಹೊಂದಿರುವ ಸಾಧ್ಯತೆಯಿದೆ. ನೂತನ ಐಫೋನ್ ಸರಣಿ, ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆ್ಯಪಲ್, ನೂತನ ಐಫೋನ್ 15 ಸರಣಿಯಲ್ಲಿ ಹೊಸದಾಗಿ ನಾಲ್ಕು ಮಾದರಿಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಲಿದೆ. ವರದಿಯ ಪ್ರಕಾರ, ಐಫೋನ್ 14 ಪ್ರೊ ಮಾದರಿಗಳಿಗೆ ಹೋಲಿಸಿದರೆ ಐಫೋನ್ 15 ಪ್ರೊ ಮಾದರಿಗಳು ಹೆಚ್ಚಿನ ಬೆಲೆಯೊಂದಿಗೆ ಬರುವ ನಿರೀಕ್ಷೆಯಿದೆ. ಐಫೋನ್ 15 ಪ್ರೊ, ಐಫೋನ್ 14 ಪ್ರೊ ಗಿಂತ ಸುಮಾರು ₹10,000 ಅಧಿಕ ಬೆಲೆ ಹೊಂದಿರುವ ಸಾಧ್ಯತೆಯಿದೆ. ನೂತನ ಐಫೋನ್ ಸರಣಿ, ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.