ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ಹೆಚ್ಚಿನ ಫೀಚರ್, ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್ಫೋನ್ ಕಂಪನಿಗಳಿಗೆ, ಬ್ರ್ಯಾಂಡ್ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಮಧ್ಯಮ ವರ್ಗದ ಜನರು ಹೆಚ್ಚಿರುವ ಮಾರುಕಟ್ಟೆಯಲ್ಲಿ, ಅವರ ಬೇಡಿಕೆ ಮತ್ತು ಅವಶ್ಯಕತೆ ಪೂರಕವಾಗಿ ಹೊಸ ಹೊಸ ಫೋನ್ಗಳು, ಕಡಿಮೆ ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ಈ ಪೈಕಿ, ಐಟೆಲ್ ಕಂಪನಿ ಕೂಡ ಪ್ರಮುಖವಾದದ್ದು. ಐಟೆಲ್, P40+ ಹೆಸರಿನ ಬಜೆಟ್ ದರದ, ಬೆಸ್ಟ್ ಬ್ಯಾಟರಿ ಹೊಂದಿರುವ ಫೋನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಹೊಸ ಫೋನ್ ಲಭ್ಯತೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ.