Karnataka Assembly Session: ವಿಧಾನ ಸಭೆ ಅಧಿವೇಶನ, ಶುಕ್ರವಾರದ ಕಾರ್ಯಕಲಾಪಗಳ ನೇರ ಪ್ರಸಾರ

Updated on: Jul 21, 2023 | 6:00 PM

ವಿಧಾನ ಸಭೆಯಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಬೆಂಗಳೂರು: ರಾಜ್ಯ 16 ನೇ ವಿಧಾನ ಸಭೆಯ ಮೊದಲ ವಿಧಾನಮಂಡಲ ಅಧಿವೇಶನ (Assembly Session) ಅಂತಿಮ ದಿನದ ಕಾರ್ಯಕಲಾಪಗಳು (proceedings) ಅರಂಭವಾಗಿದೆ. ಇವತ್ತಿನ ಕಲಾಪದ ಬಳಿಕ ಸಭಾಧ್ಯಕ್ಷರು ಅಧಿವೇಶನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡುತ್ತಾರೆ. ಸದನದಲ್ಲಿ ಬುಧವಾರ ಅಹಿತಕರ ಘಟನೆಗಳು ನಡೆದವು ಮತ್ತು 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಯಿತು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪ್ರತಿಭಟನೆ ಭಾಗವಾಗಿ ಸದನದಲ್ಲಿ ಉಪಸ್ಥಿತರಿಲ್ಲ. ಆಡಳಳಿತ ಪಕ್ಷದ ಸಾಕಷ್ಟು ಸದಸ್ಯರು ಕೂಡ ಗೈರಾಗಿದ್ದಾರೆ. ವಿಧಾನ ಸಭೆಯಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 21, 2023 11:40 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More