ಮುನಿಯಪ್ಪಗೆ ದೇವನಹಳ್ಳಿ ಟಿಕೇಟ್ ಘೋಷಣೆ: ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಿದ ಬೆಂಬಲಿಗರು

|

Updated on: Mar 25, 2023 | 9:02 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದು, ಕೆಹೆಚ್ ಮುನಿಯಪ್ಪ ಅವರಿಗೆ ದೇವನಹಳ್ಳಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇದರಿಂದ ಹರ್ಷಗೊಂಡ ಬೆಂಬಲಿಗರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಿದರು.

ದೇವನಹಳ್ಳಿ: ಕ್ಷೇತ್ರದ ಟಿಕೇಟ್ ಕೆಹೆಚ್ ಮುನಿಯಪ್ಪಗೆ (KH Muniyappa) ಘೋಷಣೆ ಹಿನ್ನೆಲೆ ಸಂತೋಷಗೊಂಡಿರುವ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನಿಗೆ ನೂಕಾಡಿ ತಳ್ಳಾಡಿ ಸ್ವಾಗತಿ ಕೋರಿದರು. ದೆಹಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempe Gowda International Airpot Bengaluru) ಬಂದಿಳಿದ ಮುನಿಯಪ್ಪ ಅವರನ್ನು ದೇವನಹಳ್ಳಿ ಮಯತ್ತು ಕೋಲಾರದ ಅಭಿಮಾನಿಗಳು ಸ್ವಾಗತಕೋರಿದರು. ಇದೇ ವೇಳೆ ನಾಯಕನಿಗೆ ಶೇಕ್ ಹ್ಯಾಂಡ್ ಕೊಡಲು ನೂಕು ನುಗ್ಗಲು ನಡೆಯಿತು. ಕಾರ್ಯಕರ್ತರ ನಡುವೆ ಸಿಲುಕಿದ ಮುನಿಯಪ್ಪ ಅವರು ಕಾರ್ಯಕರ್ತರನ್ನ ನಿಭಾಯಿಸಲು ಆಗದೆ ಪರದಾಟ ನಡೆಸಿದರು. ಅಲ್ಲದೆ, ಕಾರ್ಯಕರ್ತರ ನೂಕುನುಗ್ಗಲಿನಿಂದಾಗಿ ಪ್ರಯಾಣಿಕರು ಕೂಡ ಪರದಾಟ ನಡೆಸಬೇಕಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Mar 25, 2023 09:02 PM