KS Eshwarappa: ಬೆಳಂಬೆಳಗ್ಗೆ ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ ಮೋದಿ ಹೇಳಿದ್ದೇನು ಅಂತಾ ಇಲ್ಲಿದೆ ನೋಡಿ

|

Updated on: Apr 21, 2023 | 7:24 PM

ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವರ ರಾಜಕೀಯ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದರು. ಅಲ್ಲದೇ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು. ಇದರಿಂದ ಕೆಎಸ್ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ.

ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರು ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಣೆ  ಮಾಡಿದ್ದು, ಇದೀಗ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಶಿಸಿದ್ದಾರೆ. ಇಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವರ ರಾಜಕೀಯ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದರು. ಅಲ್ಲದೇ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು. ಇದರಿಂದ ಕೆಎಸ್ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ಬಗ್ಗೆ ಈಶ್ವರಪ್ಪನವರು ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮೋದಿ ಬೆಳಗ್ಗೆ ಕಾಲ್ ಮಾಡಿದಾಗ ನನಗೆ ಅಚ್ಚರಿ ಆಯ್ತು. ಮೋದಿ ಅವರು ಹೀಗೆ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುತ್ತಿರುವುದು ಸಂತೋಷವಾಗಿದೆ. ಇದು ಎಲ್ಲ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Follow us on