Leopard spotted in Kolar: ಕೋಲಾರ ಬಳಿಯಿರುವ ಗ್ರಾಮದ ಮನೆಯೊಂದನ್ನು ಪ್ರವೇಶಿಸಿದ ಚಿರತೆ, ಆತಂಕದಲ್ಲಿ ಗ್ರಾಮಸ್ಥರು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2023 | 11:29 AM

ಪಕ್ಕದ ಅರಣ್ಯ ಪ್ರದೇಶದಿಂದ ಚಿರತೆ ಗ್ರಾಮದೊಳಗೆ ಬಂದಿದೆಯೆಂದು ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಹೇಳುತ್ತಾರೆ.

ಕೋಲಾರ: ಕೋಲಾರ ತಾಲ್ಲೂಕಿನ (Kolar taluk) ಧನಮಟ್ನಗಳ್ಳಿ ಹೆಸರಿನ ಗ್ರಾಮದ ಮನೆಯೊಂದರಲ್ಲಿ ಬುಧವಾರ ರಾತ್ರಿ ಚಿರತೆ (leopard) ಕಾಣಿಸಿಕೊಂಡಿದೆ. ಗ್ರಾಮದ ಮನೆಯೊಂದರ ಕಂಪೌಂಡ್ ಹಾರಿದ ಚಿರತೆ ಮನೆ ಅಂಗಳದಲ್ಲಿ ನಡೆದಾಡುತ್ತಾ ಕಿಟಕಿಗಳವರೆಗೆ ಬಂದಿದೆ. ಮನೆಯಲ್ಲಿದ್ದ ಕುಟುಂಬದ ಸದಸ್ಯರು ಭಯದಿಂದ ತಲ್ಲಣಿಸಿದ್ದು ನಿಜವದರೂ ಮುಚ್ಚಿದ ಕಿಟಕಿಯಿಂದ ಮೊಬೈಲ್ ನಲ್ಲಿ ವನ್ಯಪಶು (wild beast) ಓಡಾಡುವುದನ್ನು ಚಿತ್ರಿಸಿದ್ದಾರೆ. ಘಟನೆಯಿಂದ ಧನಮಟ್ನಗಳ್ಳಿ ಗ್ರಾಮದ ನಿವಾಸಿಗಳು ಭಯಗೊಂಡಿದ್ದು, ಆದಷ್ಟು ಬೇಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪಕ್ಕದ ಅರಣ್ಯ ಪ್ರದೇಶದಿಂದ ಚಿರತೆ ಗ್ರಾಮದೊಳಗೆ ಬಂದಿದೆಯೆಂದು ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.