PM Modi in Telangana: ತೆಲಂಗಾಣದ ವಾರಂಗಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ, ರಸ್ತೆಗಳ ಇಕ್ಕೆಲ ನೆರೆದ ಜನರಿಂದ ಹರ್ಷೋದ್ಗಾರ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 08, 2023 | 2:35 PM

ರೋಡ್ ಶೋ ಬಳಿಕ ರಾಸುಗಳ ಶೆಡ್ ಒಂದಕ್ಕೆ ತೆರಳಿದ ಪ್ರಧಾನಿ ಹಸುಗಳಿಗೆ ಮೇವು ಹಾಕಿ ಅವುಗಳ ತಲೆ ನೇವರಿಸಿದರು.

ವಾರಂಗಲ್ (ತೆಲಂಗಾಣ): ವಿಧಾನ ಸಭಾ ಚುನಾವಣೆಗೆ ಅಣಿಯಾಗುತ್ತಿರುವ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲಾ ಕೇಂದ್ರಕ್ಕೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಭೇಟಿ ನೀಡಿ ಸುಮಾರು 61,000 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು (development ) ಉದ್ಘಾಟಿಸಿದರು. ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡುವ ಮೊದಲು ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ತೆಲಂಗಾಣದ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ (KC Chandrashekar) ಸದಾ ಟೀಕೆಗಳನ್ನೂ ಮಾಡುತ್ತಿದ್ದರೂ ತೆಲುಗು ಭಾಷಿಕರ ನಾಡಿನಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಮಾಸಿಲ್ಲ. ಅವರ ಕಾನ್ವಾಯ್ ಹಾದು ಹೋಗುತ್ತಿದ್ದ ರಸ್ತೆಗಳ ಇಕ್ಕೆಲ ಸಾಕಷ್ಟು ಪ್ರಮಾಣದಲ್ಲಿ ನೆರೆದಿದ್ದ ಜನ ಮೋದಿ ಮೋದಿ ಅನ್ನುತ್ತಾ ಜೈಕಾರ ಹಾಕುತ್ತಿದ್ದರು. ರೋಡ್ ಶೋ ಬಳಿಕ ರಾಸುಗಳ ಶೆಡ್ ಒಂದಕ್ಕೆ ತೆರಳಿದ ಪ್ರಧಾನಿ ಹಸುಗಳಿಗೆ ಮೇವು ಹಾಕಿದರು ಮತ್ತು ಅವುಗಳ ತಲೆ ನೇವರಿಸಿದರು. ಅದಾದ ಮೇಲೆ ಅವರು ನಗರದ ಖ್ಯಾತ ಭದ್ರಕಾಳಿ ದೇವಸ್ಥಾನದಲ್ಲಿ (Bhadrakali temple) ಪೂಜೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.