Devanahalli News: ಸಚಿವ ಮುನಿಯಪ್ಪ ದುಂಬಾಲು ಬಿದ್ದು ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿಸಿಕೊಂಡ ಶಾಸಕ ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 24, 2023 | 2:37 PM

ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ, ವಿಜಯಪುರಗಳ ಮೂಲಕ ಹಾದುಗೋಗುವ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ದೇವನಹಳ್ಳಿ: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಒಬ್ಬ ಭಿನ್ನ ರಾಜಕಾರಣಿ ಅಂತ ಈಗ ಎಲ್ಲರೂ ಹೇಳುತ್ತಿದ್ದಾರೆ. ನಿಮಗೆ ನೆನಪಿರಬಹುದು; ಕೆಲ ವಾರಗಳ ಹಿಂದೆ ದೇವನಹಳ್ಳಿಯಿಂದ (Devanahalli) ಕೆಲ ರಿಮೋಟ್ ಗ್ರಾಮಗಳಿಗೆ ಬಸ್ ವ್ಯವಸ್ಥೆಯಿಲ್ಲದೆ ಜನ ಪರದಾಡುತ್ತಿದ್ದಾರೆ ಅಂತ ಪ್ರದೀಪ್, ದೇವನಹಳ್ಳಿ ಶಾಸಕ ಹಾಗೂ ಸಚಿವ ಕೆಹೆಚ್ ಮುನಿಯಪ್ಪರ (KH Muniyappa) ಗಮನಕ್ಕೆ ತಂದಿದ್ದರು. ಅಷ್ಟು ಮಾಡಿ ಅವರು ಸುಮ್ಮನಾಗದೆ ಸಚಿವರ ದುಂಬಾಲು ಬಿದ್ದರು. ಅದರ ಪರಿಣಾಮವಾಗೇ ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ, ವಿಜಯಪುರಗಳ ಮೂಲಕ ಹಾದುಗೋಗುವ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲಂಕೃತಗೊಂಡ ಬಸ್ ಒಂದಕ್ಕೆ ಪೂಜೆ ನೆರವೇರಿಸಿದ ಬಳಿಕ ವಾಹನದ ಒಂದು ಭಾಗದಲ್ಲಿ ಸಚಿವ ಮುನಿಯಪ್ಪ ಮತ್ತೊಂದು ಭಾಗದಲ್ಲಿ ಪ್ರದೀಪ್ ಈಶ್ವರ್ ನಿಂತುಕೊಂಡು ಹಸಿರು ಬಾವುಟ ತೋರಿದರು. ನಂತರ ಅವರು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.