Netflix Password: ಇನ್ನು ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!

ಕಿರಣ್​ ಐಜಿ

Updated on: Jul 22, 2023 | 5:30 PM

ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರ ಇಮೇಲ್​ಗೆ ಮೆಸೇಜ್ ಕಳುಹಿಸಿದ್ದು, ಈಗ ನಿಮ್ಮ ಖಾತೆಯು ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಮಾತ್ರ ಎಂದು ಹೇಳಿದೆ. ಅಂದರೆ, ಒಬ್ಬರ ಖಾತೆಯನ್ನು ಅವರ ಗೆಳೆಯರು ಬಳಸಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದೆ. ಏನಿದು ಸಂಗತಿ? ವಿಡಿಯೊ ನೋಡಿ..

ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್, ಅಕೌಂಟ್ ಪಾಸ್​ವರ್ಡ್ ಶೇರಿಂಗ್ ಕುರಿತಂತೆ ದೊಡ್ಡ ಬದಲಾವಣೆ ತಂದಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ OTT ಪ್ಲಾಟ್‌ಫಾರ್ಮ್, ಪಾಸ್​ವರ್ಡ್ ಶೇರಿಂಗ್ ಆಯ್ಕೆಯನ್ನು ನಿರ್ಬಂಧಿಸಿದೆ. ಅಂದರೆ ಇನ್ನು ಮುಂದೆ ಒಬ್ಬರ ಪಾಸ್​​ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್​​ಫ್ಲಿಕ್ಸ್ ನೋಡಲು ಸಾಧ್ಯವಿಲ್ಲ. ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರ ಇಮೇಲ್​ಗೆ ಮೆಸೇಜ್ ಕಳುಹಿಸಿದ್ದು, ಈಗ ನಿಮ್ಮ ಖಾತೆಯು ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಮಾತ್ರ ಎಂದು ಹೇಳಿದೆ. ಅಂದರೆ, ಒಬ್ಬರ ಖಾತೆಯನ್ನು ಅವರ ಗೆಳೆಯರು ಬಳಸಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದೆ. ಏನಿದು ಸಂಗತಿ? ವಿಡಿಯೊ ನೋಡಿ..

Loading...
Unable to load recommendations.
Follow Us