Jarkiholi Vs Shivakumar: ರಮೇಶ್ ಜಾರಕಿಹೊಳಿ ರಿಲೀಸ್ ಮಾಡಿದ ‘ಝಲಕ್‘ ಆಡಿಯೋದಲ್ಲಿ ಸೆನ್ಸೇಷನಲ್ ಅನಿಸುಂಥದ್ದೇನೂ ಕೇಳಿಸುವುದಿಲ್ಲ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2023 | 4:17 PM

ಶಿವಕುಮಾರ್ ಧ್ವನಿ ಅಂತ ರಮೇಶ್ ಹೇಳುತ್ತಿರುವ ವ್ಯಕ್ತಿ; ಮುಂಬೈಯಲ್ಲಿ, ದುಬೈಯಲ್ಲಿ ಮನೆಯಿದೆ ಅಂತ ಹೇಳುತ್ತಾರೆ. ಮುಂಬೈ ಮನೆ ಮೇಲೆ ದಾಳಿ ನಡೆದಾಗ ಎಷ್ಟೋ ಕೋಟಿ ರೂಪಾಯಿ ಸೀಜ್ ಆಗಿದೆ ಅನ್ನುತ್ತಾರೆ.

ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಸೋಮವಾರ ಬೆಳಗ್ಗೆ ಸುದ್ದಿಗೋಷ್ಟಿ ಆರಂಭಿಸಿದಾಗ ತಮ್ಮ ಬದ್ಧ ವೈರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ನೂರೆಂಟು ಆಪಾದನೆಗಳನ್ನು ಮಾಡಿ, ತಮಲ್ಲಿ ಸಾಕ್ಷ್ಯಗಳ ರೂಪದಲ್ಲಿ ಆಡಿಯೋ ವಿಡಿಯೋ ಸಿಡಿಗಳಿವೆ ಅಂತ ಹೇಳಿದ್ದರು. ಅವುಗಳನ್ನು ಸಂಬಂಧಪಟ್ಟ ಆಧಿಕಾರಿಗಳಿಗೆ ತೋರಿಸುವುದಾಗಿ ಹೇಳಿದ ಅವರು ಒಂದು ಝಲಕ್ ಮಾತ್ರ ಇಂದು ಪತ್ರಕರ್ತರ ಮುಂದೆ ಇಡುವುದಾಗಿ ಹೇಳಿದ್ದರು. ಹೇಳಿದಂತೆಯೇ ಅವರು ಒಂದು ಆಡಿಯೋ ಕ್ಲಿಪ್ (audio clip) ರಿಲೀಸ್ ಮಾಡಿದ್ದು ನಿಜವಾದರೂ, ಅದರಲ್ಲಿ ಸೆನ್ಸೇಷನಲ್ ಅನಿಸುವಂಥದ್ದು ಏನೂ ಇಲ್ಲ. ಶಿವಕುಮಾರ್ ಧ್ವನಿ ಅಂತ ರಮೇಶ್ ಹೇಳುತ್ತಿರುವ ವ್ಯಕ್ತಿ; ಮುಂಬೈಯಲ್ಲಿ, ದುಬೈಯಲ್ಲಿ ಮನೆಯಿದೆ ಅಂತ ಹೇಳುತ್ತಾರೆ. ಮುಂಬೈ ಮನೆ ಮೇಲೆ ದಾಳಿ ನಡೆದಾಗ ಎಷ್ಟೋ ಕೋಟಿ ರೂಪಾಯಿ ಸೀಜ್ ಆಗಿದೆ ಅನ್ನುತ್ತಾರೆ. ಆಡಿಯೋ ಕೂಡ ಸ್ಪಷ್ಟವಾಗಿಲ್ಲ. ರಮೇಶ್ ಅವರಲ್ಲಿ ಇನ್ನೂ ಹಲವಾರು ಅಡಿಯೋ-ವಿಡಿಯೋಗಳಿವೆಯಂತೆ. ಅವುಗಳನ್ನು ಸಿಬಿಐ ತನಿಖೆಗೆ ಕೊಡುವುದಾಗಿ ರಮೇಶ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.