ಮಹಿಳಾ ದಿನಾಚರಣೆ ದಿನವೇ ಕೋಲಾರ ಸಂಸದ ಎಸ್ ಮುನಿಸ್ವಾಮಿ ಮಹಿಳೆಯೊರಬ್ಬರನ್ನು ಹಣೆಗೆ ಕುಂಕುಮವಿಟ್ಟುಕೊಂಡಿರದ ಕಾರಣ ಗದರಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2023 | 6:59 PM

ಸುಜಾತಾ ಹಣೆಯ ಮೇಲೆ ಕುಂಕುಮ (ಬೊಟ್ಟು, ಬಿಂದಿ) ಇಲ್ಲದಿರುವುದನ್ನು ಗಮನಿಸಿದ ಸಂಸದರು ಬೊಟ್ಟು ಯಾಕಿಟ್ಟುಕೊಂಡಿಲ್ಲ, ಗಂಡ ಬದುಕಿದ್ದಾನೆ ತಾನೇ ಅಂತೆಲ್ಲ ಗದರಲಾರಂಭಿಸಿದರು.

ಕೋಲಾರ: ಅಂತರರಾಷ್ಟ್ರೀಯ ಮಹಿಳಾ ದಿನಾನಚರಣೆಯಂದೇ (International Women’s Day) ನಗರದಲ್ಲಿ ಮಹಿಳೆಯೊಬ್ಬರು ಸಂಸದ ಎಸ್ ಮುನಿಸ್ವಾಮಿ (S Muniswamy) ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಎಕ್ಸ್ಪೋ ಒಂದರಲ್ಲಿ ಸ್ಟಾಲ್ ಹಾಕಿದ್ದ ಮುಳುಬಾಗಿಲು ನಿವಾಸಿ ಸುಜಾತಾ (Sujata) ಎನ್ನುವವರು ಹಣೆಗೆ ಕುಂಕುಮವಿಟ್ಟಿರಲಿಲ್ಲ. ಅವರು ಮರೆತಿದ್ದರೋ ಅಥವಾ ಮುಖ ತೊಳೆದುಕೊಳ್ಳುವಾಗ ತೆಗೆದಿಟ್ಟು ಪುನಃ ಹಚ್ಚಿಕೊಳ್ಳುವದನ್ನು ಮರೆತಿದ್ದರೋ ನಮಗೆ ಗೊತ್ತಿಲ್ಲ. ಆದರೆ ಅವರ ಹಣೆಯ ಮೇಲೆ  ಕುಂಕುಮ (Vermilion) (ಬೊಟ್ಟು, ಬಿಂದಿ) ಇಲ್ಲದಿರುವುದನ್ನು ಗಮನಿಸಿದ ಸಂಸದರು ಬೊಟ್ಟು ಯಾಕಿಟ್ಟುಕೊಂಡಿಲ್ಲ, ಗಂಡ ಬದುಕಿದ್ದಾನೆ ತಾನೇ ಅಂತೆಲ್ಲ ಗದರಲಾರಂಭಿಸಿದರು. ಅವರ ವಾಗ್ದಾಳಿಯಿಂದ ಅವಾಕ್ಕಾದ ಸುಜಾತಾ ತಡಬಡಾಯಿಸಿ ಹಣೆಗೆ ಬೊಟ್ಟು ಇಟ್ಟುಕೊಂಡರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 08, 2023 06:33 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.