ಸತ್ತರಷ್ಟೇ ಗೌರವಾನಾ, ಬದುಕಿ ಬಂದರೇ ಗೌರವ ಯಾಕಿಲ್ಲ? ನಿವೃತ್ತ ಸೈನಿಕನ ಮನದಾಳದ ಮಾತು; ಇಲ್ಲಿದೆ ನೋಡಿ

Edited By: ವಿವೇಕ ಬಿರಾದಾರ

Updated on: Sep 03, 2023 | 2:14 PM

26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್​ ಯುದ್ಧದಲ್ಲಿ ಭಾಗಿಯಾಗಿ, ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ಕುಮಾರ್ ಕುಂಬಾಪುರ ಅವರನ್ನು ಸ್ವಾಗತಿಸಲು ಜನರೇ ಸೇರಿರಲಿಲ್ಲ. ಸೈನಿಕನನ್ನು ಟಾಟಾ ಏಸ್ ವಾಹನದಲ್ಲಿ ಮೆರವಣಿಗೆ ಮಾಡಿದರೂ ಜನ ಪ್ರತಿಕ್ರಿಯಿಸಿಲ್ಲ.

ರಾಮನಗರ: ಯೋಧರು (Soldier) ಹಗಲು ರಾತ್ರಿ ಎನ್ನದೇ ದೇಶ ಕಾಯುತ್ತಾರೆ. ತಮ್ಮ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ದೇಶ ಕಾಯುತ್ತಾರೆ. ಈ ಯೋದರಿಗೆ ಅದೆಷ್ಟು ಸಲಾಂ ಹೇಳಿದರೂ ಸಾಲದು. ಗಡಿಯಲ್ಲಿ ಶತೃಗಳಿಗೆ ಗುಂಡಿನ ರುಚಿ ತೋರಿಸಿ ಪರಾಕ್ರಮ ಮೆರೆಯುತ್ತಾರೆ. ಇಂತಹ ಯೋಧ ನಿವೃತ್ತಿ ಹೊಂದಿ ಮರಳಿ ಗೂಡಿಗೆ ಬಂದರೇ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ, ಗೌರವಿಸುವುದು ನಮ್ಮ ಕರ್ತವ್ಯ. ಕರ್ತವ್ಯ ಆದರೆ ಇಲ್ಲಿ ಬೇರೆಯದ್ದೇ ಆಗಿದೆ. 26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್​ (Kargil) ಯುದ್ಧದಲ್ಲಿ ಭಾಗಿಯಾಗಿ, ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ಕುಮಾರ್ ಕುಂಬಾಪುರ ಅವರನ್ನು ಸ್ವಾಗತಿಸಲು ಜನರೇ ಸೇರಿರಲಿಲ್ಲ. ಸೈನಿಕನನ್ನು ಟಾಟಾ ಏಸ್ ವಾಹನದಲ್ಲಿ ಮೆರವಣಿಗೆ ಮಾಡಿದರೂ ಜನ ಪ್ರತಿಕ್ರಿಯಿಸಿಲ್ಲ. ಜನರ ಪ್ರತಿಕ್ರಿಯೆಗೆ ಸೈನಿಕ‌ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸೈನಿಕ ಸತ್ತರಷ್ಟೇ ಗೌರವಾನಾ..! ಬದುಕಿ ಬಂದರೇ ಗೌರವ ಯಾಕಿಲ್ಲ..! ಅಷ್ಟಾಗಿ ಜನ ಸೇರಲಿಲ್ಲ, ತುಂಬಾ ನೋವಿದೆ ಎಂದು ನಿವೃತ್ತ ಯೋಧ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕುಮಾರ್​ ಅವರಿಗೆ ಸ್ನೇಹಿತರು ರಾಮನಗರ ಪಟ್ಟಣದಲ್ಲಿ ಮೆರವಣಿಗೆ ಮಾಡಿ ನಂತರ ಅವರ ಗ್ರಾಮಕ್ಕೆ ಕಳುಹಿಸಿದ್ದಾರೆ.

Published on: Sep 03, 2023 02:13 PM
Follow Us
Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More