Samsung Galaxy Z Fold 6: ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್

ಕಿರಣ್​ ಐಜಿ

Updated on: Jul 12, 2024 | 4:48 PM

ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ನೂತನ ಸರಣಿಯ ಫೋಲ್ಡೇಬಲ್ ಫೋನ್​ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್‌ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಲಾಂಚ್ ಮಾಡಿದೆ.

ಗ್ಯಾಜೆಟ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಲೋಕದ ಪ್ರಮುಖ ಬ್ರ್ಯಾಂಡ್ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ನೂತನ ಸರಣಿಯ ಫೋಲ್ಡೇಬಲ್ ಫೋನ್​ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್‌ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಲಾಂಚ್ ಮಾಡಿದೆ. ಹೊಸ ಗ್ಯಾಲಕ್ಸಿ ಝಡ್ ಫೋಲ್ಡ್‌ 6 ಮತ್ತು ಝಡ್ ಫ್ಲಿಪ್ 5 ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದೆ. ಅದರ ಜತೆಗೆ, ಸ್ನ್ಯಾಪ್​ಡ್ರಾಗನ್ 8 ಜೆನ್ 3 ಮೊಬೈಲ್ ಪ್ರೊಸೆಸರ್ ಬೆಂಬಲ ಹೊಂದಿದ್ದು, ಅ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್ ಸರಣಿಯಲ್ಲೇ ಎಐ ಒಳಗೊಂಡಿರುವ ಮತ್ತು ಆಕರ್ಷಕ ಬಳಕೆಯ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. ಹೊಸ ಸರಣಿ ಫೋನ್ ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.