ಗದಗ: ಸಾರಿಗೆ ಬಸ್ ಕಿಟಕಿ ಮೇಲೆ ಕುಳಿತು ಅಪಾಯಕಾರಿ ಪ್ರಯಾಣ ಮಾಡಿದ ಮಹಿಳೆ
ಕುಳಿತುಕೊಳ್ಳಲು ಜಾಗವಿಲ್ಲದೆ ಮಹಿಳೆಯೊಬ್ಬರು ವಾಯುವ್ಯ ಸಾರಿಗೆ ಬಸ್ನ ಕಿಟಿಯಲ್ಲಿ ಕುಳಿತುಕೊಂಡು ಅಪಾಯಕಾರಿಯಾಗಿ ಪ್ರಯಾಣಿಸಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ, ಜುಲೈ 16: ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ (Shakti Scheme) ಜಾರಿ ನಂತರ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಹವಾ ಸೃಷ್ಟಿಯಾಗಿದೆ. ಹೆಚ್ಚಿನ ಬಸ್ಗಳಲ್ಲಿ ಫುಲ್ ರಶ್ ಆಗಿ ಸಂಚರಿಸುತ್ತಿವೆ. ಅದರಂತೆ ಗದಗದಲ್ಲೂ ಸಾರಿಗೆ ಬಸ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕುಳಿತುಕೊಳ್ಳಲು ಜಾಗವಿಲ್ಲದೆ ಮಹಿಳೆಯೊಬ್ಬರು ವಾಯುವ್ಯ (NWKRTC) ಬಸ್ನ ಕಿಟಕಿ ಮೇಲೆ ಕುಳಿತುಕೊಂಡು ಪ್ರಯಾಣಿಸಿದ್ದಾರೆ. ಗದಗ ನಗರದಿಂದ ಹುಲಕೋಟಿ ಗ್ರಾಮಕ್ಕೆ ತೆರಳುವ ಬಸ್ನಲ್ಲಿ ಈ ರೀತಿ ಪ್ರಯಾಣ ಮಾಡಲಾಗಿದೆ. ಈ ರೀತಿಯ ಪ್ರಯಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಿಟಿಕಿಯಿಂದ ಹೊರಗಡೆ ಬಿಳುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ, ಓವರ್ ಟೇಕ್ ಮಾಡುವಾಗ ಬೇರೊಂದು ವಾಹನ ಸೊಂಟಕ್ಕೆ ಹೊಡೆಯುವ ಸಾಧ್ಯತೆಯೂ ಹೆಚ್ಚು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ