ಸಿದ್ದರಾಮನ ಹುಂಡಿಯಲ್ಲಿ ಹಬ್ಬದ ಸಂಭ್ರಮ: ಸಿದ್ದರಾಮಯ್ಯನ ಫ್ಲೆಕ್ಸ್​ಗೆ ಹಾಲಿನ ಅಭಿಷೇಕ

ಆಯೇಷಾ ಬಾನು

Updated on: May 17, 2023 | 1:24 PM

ಸಿದ್ದರಾಮಯ್ಯ ಸಿಎಂ ಆಗುವುದು ಬಹುತೇಕ ಖಚಿತ ಹಿನ್ನೆಲೆ ಸಿದ್ದರಾಮನ ಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸಿದ್ದರಾಮಯ್ಯ ಫ್ಲೆಕ್ಸ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.

ಮೈಸೂರು: ಕರ್ನಾಟಕ ಸಿಎಂ ಸ್ಥಾನಕ್ಕೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಇಂದು ತೆರೆ ಬೀಳಲಿದೆ. ಸಿದ್ದರಾಮಯ್ಯ ಸಿಎಂ ಆಗುವುದು ಬಹುತೇಕ ಖಚಿತ ಹಿನ್ನೆಲೆ ಸಿದ್ದರಾಮನ ಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸಿದ್ದರಾಮಯ್ಯ ಜೊತೆ ಜಾತ್ರೆಯಲ್ಲಿ ವೀರಕುಣಿತ ಮಾಡಿದ ಕರಗೇಗೌಡರವರು ವೀರ ಕುಣಿತ ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ ಜೊತೆ ವೀರ ಕುಣಿತ ಮಾಡಲು ಸಿದ್ದವಾಗುತ್ತಿದ್ದೇನೆ. ಫಲಿತಾಂಶ ಬಂದ ದಿನದಿಂದ ಟೆನ್ಸನ್ ಇತ್ತು. ಈಗ ತುಂಬಾ ಖುಷಿಯಾಗಿದೆ ಎಂದು ಟಿವಿ9ಗೆ ತಿಳಿಸಿದ್ದಾರೆ.

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.