Tech Summit 2024: ನವೆಂಬರ್​ನಲ್ಲಿ ನಡೆಯಲಿರುವ ಜಾಗತಿಕ ಟೆಕ್ ಸಮ್ಮಿಟ್​ಗೆ ಬೆಂಗಳೂರು ಸಜ್ಜು

ಕಿರಣ್​ ಐಜಿ

Updated on: Jul 14, 2024 | 12:50 PM

ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್​​, ಐಟಿ ಮತ್ತು ಬಿಟಿ ಇಲಾಖೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಟೆಕ್​ ಸಮ್ಮಿಟ್ ಆಯೋಜಿಸಲಾಗುತ್ತಿದೆ. ಬ್ರೇಕಿಂಗ್ ಬೌಂಡರೀಸ್ ಎಂಬ ಥೀಮ್​ನೊಂದಿಗೆ ಈ ಬಾರಿಯ ಟೆಕ್ ಸಮ್ಮಿಟ್ ಮೂರು ದಿನಗಳ ಕಾಲ ನಡೆಯಲಿದೆ.

ಐಟಿ ಬಿಟಿ ಕ್ರಾಂತಿಯಿಂದಾಗಿ ಜಗತ್ತಿನ ಗಮನ ಸೆಳೆದಿರುವ ಬೆಂಗಳೂರು 27ನೇ ಆವೃತ್ತಿಯ ಜಾಗತಿಕ ಟೆಕ್ ಸಮ್ಮಿಟ್​ಗೆ ಸಜ್ಜಾಗಿದೆ. ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್​​, ಐಟಿ ಮತ್ತು ಬಿಟಿ ಇಲಾಖೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಟೆಕ್​ ಸಮ್ಮಿಟ್ ಆಯೋಜಿಸಲಾಗುತ್ತಿದೆ. ಬ್ರೇಕಿಂಗ್ ಬೌಂಡರೀಸ್ ಎಂಬ ಥೀಮ್​ನೊಂದಿಗೆ ಈ ಬಾರಿಯ ಟೆಕ್ ಸಮ್ಮಿಟ್ ಮೂರು ದಿನಗಳ ಕಾಲ ನಡೆಯಲಿದೆ. ನವೆಂಬರ್​​ 19ರಿಂದ 21ರ ವರೆಗೆ ನಡೆಯುವ ಟೆಕ್ ಸಮ್ಮಿಟ್​ನಲ್ಲಿ 30ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗುತ್ತಿದ್ದು, ಸಾರ್ವಜನಿಕರು ಕೂಡ ಟೆಕ್​ ಸಮ್ಮಿಟ್​ನಲ್ಲಿ ಭಾಗವಹಿಸಲು ಅವಕಾಶವಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.