Davanagere: ಟೋಲ್ ಪ್ಲಾಜಾಗಳಲ್ಲಿ ರಾತ್ರೋರಾತ್ರಿ ಶೇಕಡ 100 ರಷ್ಟು ಶುಲ್ಕ ಹೆಚ್ಳಳ, ಕಂಗಾಲಾದ ವಾಹನ ಸವಾರರು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2023 | 11:52 AM

ತಕರಾರು ಎತ್ತಿದ ವಾಹನ ಸವಾರರಿಗೆ ಟೋಲ್ ಸಿಬ್ಬಂದಿಯಿಂದ ಹೆದ್ದಾರಿ ಪ್ರಾಧಿಕಾರದ ಸೂಚನೆ ಮೇರೆಗೆ ಹೆಚ್ಚಿಸಲಾಗಿದೆ ಎಂಬ ಜವಾಬು ಸಿಗುತ್ತಿದೆ. ವಾಹನ ಚಾಲಕರು ಈ ದಿಢೀರ್ ಹೆಚ್ಚಳದಿಂದ ಕಂಗಾಲಾಗುತ್ತಿದ್ದಾರೆ.

ದಾವಣಗೆರೆ: ಟೋಲ್ ಪ್ಲಾಜಾಗಳ (toll plaza) ಗುತ್ತಿಗೆ ಪಡೆಯುವ ಜನಕ್ಕೆ ಹೇಳೋರು ಕೇಳೋರು ಯಾರೂ ಇಲ್ಲವೇ ಎಂಬ ಬಲವಾದ ಶಂಕೆ ವಾಹನ ಸವಾರರಲ್ಲಿ ಹುಟ್ಟಿಕೊಂಡಿದೆ. ನಿಮಗಿಲ್ಲಿ ಕಾಣುತ್ತಿರೋದು ದಾವಣಗೆರೆ (Davanagere) ಜಿಲ್ಲೆಯಲ್ಲಿರುವ ಹೆಬ್ಬಾಳು ಟೋಲ್ ಪ್ಲಾಜಾ. ಕಳೆದ ರಾತ್ರಿ ರೂ. 60 ರಷ್ಟಿದ್ದ ಟೋಲ್ ಶುಲ್ಕ ಇಂದು ಬೆಳಗ್ಗೆ ರೂ. 120 ಆಗಿದೆ ಅಂದರೆ ಶೇಕಡಾ 100 ರಷ್ಟು ಹೆಚ್ಚಳ! ಹಾವೇರಿಯ (Haveri) ಜಿಲ್ಲೆಯಲ್ಲಿರುವ ಎರಡು-ಮೂರು ಟೋಲ್ ಪ್ಲಾಜಾಗಳಲ್ಲೂ ಟೋಲ್ ಶುಲ್ಕವನ್ನು ಶೇಕಡಾ 100 ರಷ್ಟು ಹೆಚ್ಚಿಸಲಾಗಿದೆ. ತಕರಾರು ಎತ್ತಿದ ವಾಹನ ಸವಾರರಿಗೆ ಟೋಲ್ ಸಿಬ್ಬಂದಿಯಿಂದ ಹೆದ್ದಾರಿ ಪ್ರಾಧಿಕಾರದ (NHAI) ಸೂಚನೆ ಮೇರೆಗೆ ಹೆಚ್ಚಿಸಲಾಗಿದೆ ಎಂಬ ಜವಾಬು ಸಿಗುತ್ತಿದೆ. ವಾಹನ ಚಾಲಕರು ಈ ದಿಢೀರ್ ಹೆಚ್ಚಳದಿಂದ ಕಂಗಾಲಾಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.