ಶಿವಮೊಗ್ಗ ಖಾಸಗಿ ಕಾಲೇಜ್​ನಲ್ಲಿ ಅದ್ಧೂರಿ ಟ್ರೆಡಿಷನಲ್​ ಡೇ! ನಾನಾ ವೇಷಭೂಷಣಗಳಲ್ಲಿ ಮಿಂಚಿದ ಸ್ಟುಡೆಂಟ್ಸ್​

ಸಾಧು ಶ್ರೀನಾಥ್​

Updated on: Aug 18, 2023 | 3:53 PM

Traditional Day: ಶಿವಮೊಗ್ಗದ ಖಾಸಗಿ ಕಾಲೇಜ್​ನಲ್ಲಿ ಟ್ರೆಡಿಷನಲ್​ ಡೇ ಅದ್ಧೂರಿಯಾಗಿತ್ತು. ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಬಿಸಿಎ, ಬಿಎಸ್​​ಸಿ ವಿದ್ಯಾರ್ಥಿಗಳು ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಭರ್ಜರಿಯಾಗಿ ರೆಡಿ ಆಗಿದ್ರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಮಹಿಳೆಯರಾಗಿ ಕಂಗೊಳಿಸಿದರು.

ಶಿವಮೊಗ್ಗದ (Shivamogga) ಖಾಸಗಿ ಕಾಲೇಜ್​ನಲ್ಲಿ ಟ್ರೆಡಿಷನಲ್​ ಡೇ (Traditional Day) ಅದ್ಧೂರಿಯಾಗಿತ್ತು. ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಬಿಸಿಎ, ಬಿಎಸ್​​ಸಿ ವಿದ್ಯಾರ್ಥಿಗಳು ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು (Students) ಭರ್ಜರಿಯಾಗಿ ರೆಡಿ ಆಗಿದ್ರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಮಹಿಳೆಯರಾಗಿ ಕಂಗೊಳಿಸಿದ್ರೆ, ಹುಡುಗರು ತಾವೇನ್​ ಕಮ್ಮಿ ಎಂಬಂತೆ, ಜುಬ್ಬಾ, ಪೈಜಾಮ್, ಧೋತಿ, ಲುಂಗಿ, ಧರಿಸಿ ಗಮನ ಸೆಳೆದು, ಡಿಜೆ ಸದ್ದಿಗೆ ಮಸ್ತ್​ ಮಸ್ತ್​ ಸ್ಟೆಪ್​ ಹಾಕಿದ್ರು. ಗಣಪತಿ & ಸರಸ್ವತಿ ಪೂಜೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು