ಬೆಳಗಾವಿಯ ಬಡಾವಣೆಯೊಂದರಲ್ಲಿ ಅಳವಡಿಸಿರುವ ಟ್ರಾನ್ಸ್​ಫಾರ್ಮರ್​ಗಳು ಮೃತ್ಯುಗೆ ಆಹ್ವಾನ ನೀಡುವಂತಿವೆ!

ಅರುಣ್​ ಕುಮಾರ್​ ಬೆಳ್ಳಿ

Updated on: Nov 26, 2023 | 11:18 AM

ಟಿಸಿ ಪಕ್ಕ ಓಪನ್ ಜಾಗ ಇರೋದ್ರಿಂದ ಮಕ್ಕಳು ಸಹಜವಾಗೇ ಅಲ್ಲಿ ಆಟವಾಡುತ್ತಿರುತ್ತವೆ. ಚೆಂಡು ಅಥವಾ ಮತ್ತೊಂದು ಟಿಸಿ ಬಳಿ ಹೋಗಿ ಮಕ್ಕಳು ಅದನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದರೆ, ಅಪಾಯ ತಪ್ಪಿದಲ್ಲ. ಬಾಲಕನೊಬ್ಬ ತನ್ನ ಅತಂಕವನ್ನು ವರದಿಗಾರನೊಂದಿಗೆ ತೋಡಿಕೊಳ್ಳುತ್ತಿದ್ದಾನೆ. ಜಾರ್ಜ್ ಸಾಹೇಬರೇ ಕಾಣಿಸ್ತಾ ಇದೆಯಾ?

ಬೆಳಗಾವಿ: ಸಿದ್ರಾಮಯ್ಯ ಸರ್ಕಾರ (Siddaramaiah government) ಘೋಷಿಸಿದ ಗೃಹಜ್ಯೋತಿ ಗ್ಯಾರಂಟಿ ಅಡಿ (Gruha Jyothi Scheme) ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಆದು ಉಚಿತ, ಸರಿ ತಾನೇ? ಆದರೆ ಬೆಳಗಾವಿಯ ಹೆಸ್ಕಾಂ ಸಿಬ್ಬಂದಿ (HESCOM officials) ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ವಿದ್ಯುತ್ ಜೊತೆ ಸಾವು ಕೂಡ ಉಚಿತ ಅನ್ನುತ್ತಿದ್ದಾರೆ! ಟಿವಿ9 ಕನ್ನಡ ವಾಹಿನಿ ಬೆಳಗಾವಿ ವರದಿಗಾರ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಪ್ರತ್ಯಕ್ಷ ಚಿತ್ರಣವನ್ನು ನೀಡಿದ್ದಾರೆ. ಈ ಬಡಾವಣೆಯಲ್ಲಿ 5-6 ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದ್ದು ಅವು ನೆಲದಿಂದ ಕೇವಲ ಒಂದು ಅಡಿಯಷ್ಟು ಮಾತ್ರ ಎತ್ತರದಲ್ಲಿವೆ ಮತ್ತು ಅವು ತೆರೆದುಕೊಂಡಿರುವ ಸ್ಥಿತಿಯಲ್ಲಿದ್ದು ಲೈವ್​ವೈರ್​ಗಳು ಹೊರಗಡೆ ಜೋತಾಡುತ್ತಿವೆ. ಟಿಸಿ ಪಕ್ಕ ಓಪನ್ ಜಾಗ ಇರೋದ್ರಿಂದ ಮಕ್ಕಳು ಸಹಜವಾಗೇ ಅಲ್ಲಿ ಆಟವಾಡುತ್ತಿರುತ್ತವೆ. ಚೆಂಡು ಅಥವಾ ಮತ್ತೊಂದು ಟಿಸಿ ಬಳಿ ಹೋಗಿ ಮಕ್ಕಳು ಅದನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದರೆ, ಅಪಾಯ ತಪ್ಪಿದಲ್ಲ. ಈ ಬಾಲಕ ತನ್ನ ಅತಂಕವನ್ನು ವರದಿಗಾರನೊಂದಿಗೆ ತೋಡಿಕೊಳ್ಳುತ್ತಿದ್ದಾನೆ. ಜಾರ್ಜ್ ಸಾಹೇಬರೇ ಕಾಣಿಸ್ತಾ ಇದೆಯಾ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.