ಬೈಕ್ ಏರಿ ಪಾಂಗಾಂಗ್ ಸರೋವರಕ್ಕೆ ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನಂದರು ಗೊತ್ತಾ!?
ಫೋಟೋಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ, "ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಮ್ಮ ತಂದೆ ಬಣ್ಣಿಸಿದ್ದರು’ ಎಂದು ಜ್ಞಾಪಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಲಡಾಖ್ ಬೈಕ್ ರೈಡ್ ನ ಕೆಲವು ಫೋಟೋಗಳನ್ನು ಕಾಂಗ್ರೆಸ್ ಪಕ್ಷವೂ ತನ್ನ ಅಧಿಕೃತ ಎಕ್ಸ್ ಟ್ವಿಟ್ಟರ್ ಹ್ಯಾಂಡಲ್‌ನಿಂದಲೂ ಹಂಚಿಕೊಂಡಿದೆ. ಪಾಂಗಾಂಗ್ ಸರೋವರದ ಬಳಿಯ ಪ್ರವಾಸಿ ಶಿಬಿರದಲ್ಲಿ ರಾಹುಲ್ ಗಾಂಧಿ ಶನಿವಾರ ರಾತ್ರಿ ತಂಗುವ ನಿರೀಕ್ಷೆಯಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ -ಕಾರ್ಗಿಲ್ (ಎಲ್‌ಎಎಚ್‌ಡಿಸಿ-ಕಾರ್ಗಿಲ್ Ladakh Autonomous Hill Development Council LAHDC-Kargil) ಚುನಾವಣೆ ಅಂಗವಾಗಿ ಲಡಾಖ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶನಿವಾರ ಅವರು ಪ್ಯಾಂಗೊಂಗ್ ಸರೋವರಕ್ಕೆ ಬೈಕ್ ಪ್ರಯಾಣ (bike ride) ಮಾಡಿದರು. ವಯನಾಡ್ ಸಂಸದ (Wayanad MP) ರಾಹುಲ್ ಗಾಂಧಿ ಅವರು ತಮ್ಮ ಲಡಾಖ್ ಭೇಟಿ ಸಂದರ್ಭದ ಬೈಕ್ ರೈಡ್‌ನ 10 ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ, “ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಮ್ಮ ತಂದೆ ಬಣ್ಣಿಸಿದ್ದರು’ ಎಂದು ಜ್ಞಾಪಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಲಡಾಖ್ ಬೈಕ್ ರೈಡ್ ನ ಕೆಲವು ಫೋಟೋಗಳನ್ನು ಕಾಂಗ್ರೆಸ್ ಪಕ್ಷವೂ ತನ್ನ ಅಧಿಕೃತ ಎಕ್ಸ್ ಟ್ವಿಟ್ಟರ್ ಹ್ಯಾಂಡಲ್‌ನಿಂದಲೂ ಹಂಚಿಕೊಂಡಿದೆ. ಪಾಂಗಾಂಗ್ ಸರೋವರದ ಬಳಿಯ ಪ್ರವಾಸಿ ಶಿಬಿರದಲ್ಲಿ ರಾಹುಲ್ ಗಾಂಧಿ ಶನಿವಾರ ರಾತ್ರಿ ತಂಗುವ ನಿರೀಕ್ಷೆಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ