WhatsApp Ban: ಭಾರತದ ನಿಯಮ ಉಲ್ಲಂಘಿಸಿದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬಂದ್

ಕಿರಣ್​ ಐಜಿ

Updated on: Jul 05, 2023 | 7:25 AM

ವಾಟ್ಸ್​ಆ್ಯಪ್ ಮೇ ತಿಂಗಳಲ್ಲಿ ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಮೇ ತಿಂಗಳಲ್ಲಿ ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 65,08,000 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಕೂಡ ಭಾರತದಲ್ಲಿ 74 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು. ಈ ಬಾರಿಯೂ ವಾಟ್ಸ್​ಆ್ಯಪ್ ಅಂತಹ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.