ಪಾಕಿಸ್ತಾನದಿಂದ ಹೊಸ ಆ್ಯಪ್ ಬಿಡುಗಡೆ, ವಾಟ್ಸ್​ಆ್ಯಪ್​ಗೇ ಸೆಡ್ಡು!

ಕಿರಣ್​ ಐಜಿ

Updated on: Aug 12, 2023 | 7:30 AM

ಸೈಬರ್‌ ದಾಳಿಗಳನ್ನು ತಗ್ಗಿಸುವುದು ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್​ನ ಗುರಿಯಾಗಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ.

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆಯುವಂತಹ ಆ್ಯಪ್ ಒಂದನ್ನು ಪಾಕಿಸ್ತಾನ ತನ್ನ ದೇಶದಲ್ಲಿ ಬಿಡುಗಡೆ ಮಾಡಿದೆ. ವಾಟ್ಸ್​ಆ್ಯಪ್ ಪ್ರತಿಸ್ಪರ್ಧಿಯ ಹೆಸರನ್ನು ಪಾಕ್ ದೇಶ ಬೀಪ್ ಪಾಕಿಸ್ತಾನ್ ಎಂದು ಹೆಸರಿಸಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಅನ್ನು ಪಾಕಿಸ್ತಾನದ ಐಟಿ ಸಚಿವಾಲಯವು ದೇಶದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಸೈಬರ್‌ ದಾಳಿಗಳನ್ನು ತಗ್ಗಿಸುವುದು ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್​ನ ಗುರಿಯಾಗಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.