WhatsApp Warning: ಕಿರಿಕಿರಿ ಮಾಡಿದ್ರೆ ದೇಶ ಬಿಟ್ಟು ಹೋಗ್ತೇವೆ ಎಂದ ವಾಟ್ಸ್​​ಆ್ಯಪ್

ಕಿರಣ್​ ಐಜಿ

Updated on: May 03, 2024 | 7:26 AM

ವಾಟ್ಸ್​​ಆ್ಯಪ್ ಕಾಲ್, ಮೆಸೇಜ್ ಎಂಡ್ ಟು ಎಂಡ್ ಎನ್​ಕ್ರಿಪ್ಟೆಡ್ ಎಂದು ಹೇಳುತ್ತದೆ. ವಾಟ್ಸ್​​ಆ್ಯಪ್ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ.

ವಾಟ್ಸ್​​ಆ್ಯಪ್ ಬಳಕೆದಾರರ ಖಾಸಗಿತನ ರಕ್ಷಣೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಜತೆಗೆ ವಾಟ್ಸ್​​ಆ್ಯಪ್ ಕಾಲ್, ಮೆಸೇಜ್ ಎಂಡ್ ಟು ಎಂಡ್ ಎನ್​ಕ್ರಿಪ್ಟೆಡ್ ಎಂದು ಹೇಳುತ್ತದೆ. ವಾಟ್ಸ್​​ಆ್ಯಪ್ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ. ಮೆಸೇಜ್ ಟ್ರೇಸಿಂಗ್​ಗೆ ಬಲವಂತ ಪಡಿಸಿದರೆ ಭಾರತದಿಂದ ತನ್ನ ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸ್​​ಆ್ಯಪ್ ಸಂಸ್ಥೆ ಹೇಳಿದೆ. ಫೇಸ್​ಬುಕ್​ನ ಸೋದರಸಂಸ್ಥೆಯಾದ ವಾಟ್ಸ್​​ಆ್ಯಪ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ವಿಚಾರಣೆಯಲ್ಲಿ ಈ ವಿಚಾರದಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.